Exodus 27:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಪ್ಪತ್ತು ಕಂಬಗಳನ್ನು ಮತ್ತು ಆ ಕಂಬಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳನ್ನು ಮಾಡಿಸಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳನ್ನು ಮತ್ತು ಪರದೆಯ ಕೋಲುಗಳಿಗೆ ಬೆಳ್ಳಿಯ ಕಂಬಿಗಳನ್ನು ಮಾಡಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಕಡೆಯಲ್ಲಿ ಇಪ್ಪತ್ತು ಕಂಬಗಳು. ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೆ ಕಲ್ಲುಗಳು ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳೂ ಪಟ್ಟಿಗಳೂ ಇರಬೇಕು.
Kannada BSI Bible 2016
ಅದರ ಸ್ತಂಭಗಳು ಇಪ್ಪತ್ತು, ಅವುಗಳಿಗೆ ಹಿತ್ತಾಳೆಯ ಕುಳಿಗಳು ಇರಬೇಕು; ಸ್ತಂಭಗಳ ಕೊಂಡಿಗಳನ್ನೂ ಅವುಗಳ ಪಟ್ಟಿಗಳನ್ನೂ ಬೆಳ್ಳಿಯಿಂದ ಮಾಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಕಡೆಯಲ್ಲಿ ಇಪ್ಪತ್ತು ಕಂಬಗಳೂ ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇ ಕಲ್ಲುಗಳೂ ಇರಬೇಕು.
Kannada Bible (KNCL) BSI 2016
ಆ ಕಡೆಯಲ್ಲಿ ಇಪ್ಪತ್ತು ಕಂಬಗಳು ಹಾಗು ಅವುಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇ ಕಲ್ಲುಗಳೂ ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಂಡಿಗಳೂ ಇರಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಕಡೆಯಲ್ಲಿ ಇಪ್ಪತ್ತು ಸ್ತಂಭಗಳು ಮತ್ತು ಅವುಗಳಿಗೆ ಇಪ್ಪತ್ತು ಕಂಚಿನ ಗದ್ದಿಗೇ ಕಲ್ಲುಗಳಿರಬೇಕು. ಸ್ತಂಭಗಳ ಕೊಂಡಿಗಳನ್ನು ಮತ್ತು ಅವುಗಳ ಪಟ್ಟಿಗಳನ್ನು ಬೆಳ್ಳಿಯಿಂದ ಮಾಡಬೇಕು.