Exodus 28:32 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ತಲೆಯನ್ನು ತೂರಿಸುವುದಕ್ಕೆ ಮಧ್ಯದಲ್ಲಿ ಒಂದು ಸಂದು ಮಾಡಿಸು. ಈ ಸಂದಿನ ಸುತ್ತಲೂ ಹೆಣೆದ ಬಟ್ಟೆಯನ್ನು ಹೊಲಿಸು. ಈ ಬಟ್ಟೆಯು ಸಂದು ಹರಿದುಹೋಗದಂತೆ ಕಾಪಾಡುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಲೆತೂರಿಸುವುದಕ್ಕೆ ಅದರಲ್ಲಿ ಸಂದು ಇರಬೇಕು. ಅದು ಹರಿಯದಂತೆ ಆ ಸಂದಿನ ಸುತ್ತಲೂ ನೇಯಿಗೆ ಕಸೂತಿಯನ್ನು ಅದರೊಂದಿಗೆ ಒಂದು ಪಟ್ಟಿಯನ್ನು ಹಾಕಿಸಬೇಕು.
Kannada BSI Bible 2016
ಅದರ ಮಧ್ಯದಲ್ಲಿ ಮೇಲ್ಗಡೆ (ತಲೆದೂರಿಸುವದಕ್ಕೆ) ರಂಧ್ರವಿರಬೇಕು. ಆ ರಂಧ್ರದ ಸುತ್ತಲೂ ಹೆಣಿಗೆಯ ಕೆಲಸದ ಗೋಟಿರ ಬೇಕು. ಅದು ಹರಿಯದ ಹಾಗೆ ಅದಕ್ಕೆ ರಂಧ್ರದ ಕವಚವಿರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಲೆದೂರಿಸುವದಕ್ಕೆ ಅದರಲ್ಲಿ ಸಂದು ಇರಬೇಕು. ಅದು ಹರಿಯದಂತೆ ಯುದ್ಧದ ಕವಚದೋಪಾದಿಯಲ್ಲಿ ಆ ಸಂದಿನ ಸುತ್ತಲು ನೇಯಿಗೇ ಕಸೂತಿಯನ್ನು ಹಾಕಿಸಬೇಕು.
Kannada Bible (KNCL) BSI 2016
ತಲೆದೂರಿಸುವುದಕ್ಕೆ ಇರುವ ಸಂದಿನ ಸುತ್ತಲೂ ನೇಯಿಗೆ ಕಸೂತಿಯನ್ನು ಹಾಕಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದರ ಮಧ್ಯದಲ್ಲಿ ಮೇಲ್ಗಡೆ ತಲೆದೂರಿಸುವುದಕ್ಕೆ ರಂದ್ರವಿರಬೇಕು. ಅದು ಹರಿಯದ ಆ ರಂದ್ರದ ಸುತ್ತಲೂ ನೇಯ್ಗೆ ಕಸೂತಿಯನ್ನು ಹಾಕಿಸಬೇಕು.