Exodus 28:38 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆರೋನನು ಇದನ್ನು ತನ್ನ ಹಣೆಯ ಮೇಲೆ ಧರಿಸಿಕೊಳ್ಳುವನು. ಹೀಗೆ, ಇಸ್ರೇಲರು ಅರ್ಪಿಸಿದ ಕಾಣಿಕೆಗಳಲ್ಲಿ ದೋಷವೇನಾದರೂ ಇದ್ದರೆ ಅವನು ಅದನ್ನು ತನ್ನ ಮೇಲೆ ತೆಗೆದುಕೊಂಡು ತಾನೇ ಅದನ್ನು ವಹಿಸಿಕೊಳ್ಳುವನು. ಇವು ಜನರು ಯೆಹೋವನಿಗೆ ಸಮರ್ಪಿಸುವ ಕಾಣಿಕೆಗಳಾಗಿವೆ. ಜನರ ಕಾಣಿಕೆಗಳನ್ನು ಯೆಹೋವನು ಅಂಗೀಕರಿಸುವಂತೆ ಆರೋನನು ಇದನ್ನು ಯಾವಾಗಲೂ ತನ್ನ ಶಿರದಲ್ಲಿ ಧರಿಸಿಕೊಂಡಿರುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲ್ಯರು ಕಾಣಿಕೆಯಾಗಿ ಸಮರ್ಪಿಸುವ ದೇವರ ಎಲ್ಲಾ ಪವಿತ್ರವಸ್ತುಗಳ ವಿಷಯದಲ್ಲಿ ದೋಷವೇನಾದರೂ ಇದ್ದರೆ ಆರೋನನು ಆ ಪಟ್ಟವನ್ನು ಯಾವಾಗಲೂ ಹಣೆಯ ಮೇಲೆ ಧರಿಸಿ ಆ ದೋಷ ಫಲವನ್ನು ವಹಿಸಿಕೊಳ್ಳುವುದರಿಂದ ಅವರು ಯೆಹೋವನಿಗೆ ಮೆಚ್ಚಿಕೆಯುಳ್ಳವರಾಗಿರುವರು.
Kannada BSI Bible 2016
ಇಸ್ರಾಯೇಲ್ ಮಕ್ಕಳು ತಮ್ಮ ಪರಿಶುದ್ಧ ದಾನಗಳನ್ನೆಲ್ಲಾ ಪರಿಶುದ್ಧ ಮಾಡುವ ಪರಿಶುದ್ಧ ಕಾರ್ಯಗಳ ಅಕ್ರಮವನ್ನು ಆರೋನನು ಹೊರುವ ಹಾಗೆ ಅದು ಆರೋನನ ಹಣೆಯ ಮೇಲಿರಬೇಕು. ಕರ್ತನ ಮುಂದೆ ಅವುಗಳೆಲ್ಲಾ ಅಂಗೀಕಾರವಾಗುವ ಹಾಗೆ ಅದು ಯಾವಾಗಲೂ ಅವನ ಹಣೆಯ ಮೇಲೆ ಇರಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರು ಕಾಣಿಕೆಯಗಿ ಸಮರ್ಪಿಸುವ ದೇವರ ಎಲ್ಲಾ ವಸ್ತುಗಳ ವಿಷಯದಲ್ಲಿ ದೋಷವೇನಾದರೂ ಇದ್ದರೆ ಆರೋನನು ಆ ಪಟ್ಟವನ್ನು ಯಾವಾಗಲೂ ಹಣೆಯ ಮೇಲೆ ಧರಿಸಿ ಆ ದೋಷವನ್ನು ವಹಿಸಿಕೊಂಡದರಿಂದ ಅವರು ಯೆಹೋವನ ಸನ್ನಿಧಿಯಲ್ಲಿ ಅಂಗೀಕರಿಸಲ್ಪಡುವರು.
Kannada Bible (KNCL) BSI 2016
ಇಸ್ರಯೇಲರನ್ನು ಪರಿಶುದ್ಧಗೊಳಿಸುವ ಪವಿತ್ರವಸ್ತುಗಳಲ್ಲಿ ಹಾಗು ಅವರು ಕಾಣಿಕೆಯಾಗಿ ಸಮರ್ಪಿಸುವ ಸಮಸ್ತವಸ್ತುಗಳಲ್ಲಿ ದೋಷವೇನಾದರು ಇದ್ದರೆ ಆರೋನನು ಆ ಪಟ್ಟಿಯನ್ನು ತಲೆಯ ಮೇಲೆ ಧರಿಸಿ ಆ ದೋಷವನ್ನು ತಾನೇ ವಹಿಸಿಕೊಳ್ಳುತ್ತಾನೆ. ಆದ್ದರಿಂದ ಅವರು ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಅಂಗೀಕೃತರಾಗುತ್ತಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ರಾಯೇಲರು ತಮ್ಮ ಪರಿಶುದ್ಧ ದಾನಗಳನ್ನೆಲ್ಲಾ ಪರಿಶುದ್ಧ ಮಾಡುವ ಪರಿಶುದ್ಧ ಕಾರ್ಯಗಳ ದೋಷವನ್ನು ಆರೋನನು ಹೊರುವ ಹಾಗೆ ಅದು ಆರೋನನ ಹಣೆಯ ಮೇಲಿರಬೇಕು. ಯೆಹೋವ ದೇವರ ಮುಂದೆ ಅವುಗಳೆಲ್ಲಾ ಅಂಗೀಕಾರವಾಗುವ ಹಾಗೆ ಅದು ಯಾವಾಗಲೂ ಅವನ ಹಣೆಯ ಮೇಲೆ ಇರಬೇಕು.