Exodus 28:39 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಹೆಣೆದ ಅಂಗಿಯನ್ನು ಮತ್ತು ಮುಂಡಾಸವನ್ನು ಮಾಡಲು ಉತ್ಕೃಷ್ಠವಾದ ನಾರಿನ ಬಟ್ಟೆಯನ್ನು ಉಪಯೋಗಿಸು. ನಡುಕಟ್ಟನ್ನು ಬುಟ್ಟೀದಾರಿ ಕೆಲಸದಿಂದ ಮಾಡಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆರೋನನು ಧರಿಸಬೇಕಾದ ಒಳ ಅಂಗಿಯನ್ನು ಹತ್ತಿಯ ನೂಲಿನಿಂದ ಕಸೂತಿ ಹಾಕಿಸಿ ನೇಯಿಸಬೇಕು. ಅವನ ಮುಂಡಾಸವನ್ನು ಹತ್ತಿಯ ನೂಲಿನಿಂದ ಮಾಡಿಸಬೇಕು. ಅವನ ನಡುಕಟ್ಟನ್ನು ಕಸೂತಿ ಕೆಲಸದಿಂದ ಮಾಡಿಸಬೇಕು.
Kannada BSI Bible 2016
ನಯವಾದ ನಾರಿನಿಂದ ಕಸೂತಿ ಮಾಡಿದ ಮೇಲಂಗಿಯನ್ನೂ ನಯವಾದ ನಾರಿನ ಮುಂಡಾಸ ವನ್ನೂ ಹೆಣಿಗೆಯ ಕೆಲಸದ ನಡುಕಟ್ಟನ್ನೂ ಮಾಡಿಸ ಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆರೋನನು ಧರಿಸಬೇಕಾದ ನಿಲುವಂಗಿಯನ್ನು ನಾರಿನಿಂದ ವಿಚಿತ್ರವಾಗಿ ನೇಯಿಸಬೇಕು; ಅವನ ಮುಂಡಾಸವನ್ನು ನಾರಿನಿಂದ ಮಾಡಿಸಬೇಕು; ಅವನ ನಡುಕಟ್ಟನ್ನು ಬುಟೇದಾರಿ ಕೆಲಸದಿಂದ ಮಾಡಿಸಬೇಕು.
Kannada Bible (KNCL) BSI 2016
“ಆರೋನನು ಧರಿಸಬೇಕಾದ ನಿಲುವಂಗಿಯನ್ನು ನಯವಾದ ನಾರಿನಿಂದ ನೇಯಿಸು. ಅವನ ಪೇಟವನ್ನೂ ಅಂತೆಯೇ ನಯವಾದ ನಾರಿನಿಂದ ಮಾಡಿಸು. ಅವನ ನಡುಕಟ್ಟು ಕಸೂತಿ ಕೆಲಸದಿಂದ ಅಲಂಕಾರವಾಗಿರಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸದಿಂದ ಮಾಡಿದ ಮೇಲಂಗಿಯನ್ನೂ ನಯವಾದ ನಾರಿನಿಂದ ಮಾಡಿದ ಮುಂಡಾಸವನ್ನೂ ಹೆಣಿಗೆಯ ಕೆಲಸದಿಂದ ನಡುಕಟ್ಟನ್ನೂ ಮಾಡಿಸಬೇಕು.