Exodus 28:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಮಾಡತಕ್ಕ ಬಟ್ಟೆಗಳು ಯಾವುವೆಂದರೆ: ದೈವನಿರ್ಣಯಕ ಪದಕ, ಏಫೋದು, ನೀಲಿಯ ನಿಲುವಂಗಿ, ಹೆಣೆದ ಬಿಳಿಯ ನಿಲುವಂಗಿ, ಮುಂಡಾಸು ಮತ್ತು ನಡುಕಟ್ಟು. ನಿನ್ನ ಅಣ್ಣನಾದ ಆರೋನನಿಗೂ ಅವನ ಗಂಡುಮಕ್ಕಳಿಗೂ ಈ ವಿಶೇಷ ಬಟ್ಟೆಗಳನ್ನು ಅವರು ಮಾಡಬೇಕು. ಆಗ ಆರೋನನೂ ಅವನ ಗಂಡುಮಕ್ಕಳೂ ಯಾಜಕರಾಗಿ ನನ್ನ ಸೇವೆಮಾಡಬಹುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಮಾಡಬೇಕಾದ ವಸ್ತ್ರಗಳು ಯಾವುವೆಂದರೆ; ಎದೆಯ ಪದಕದ ಚೀಲ, ಏಫೋದ್, ನಿಲುವಂಗಿ, ಕಸೂತಿ ಕೆಲಸದ ಮೇಲಂಗಿ, ಮುಂಡಾಸ ಹಾಗೂ ನಡುಕಟ್ಟು ಇವುಗಳೇ. ನಿನ್ನ ಸಹೋದರನಾದ ಆರೋನನೂ ಅವನ ಮಕ್ಕಳೂ ನನ್ನ ಯಾಜಕರಾಗುವುದಕ್ಕೆ ಅವರಿಗೋಸ್ಕರ ಈ ದೀಕ್ಷಾವಸ್ತ್ರಗಳನ್ನು ಮಾಡಿಸಬೇಕು.
Kannada BSI Bible 2016
ಅವರು ಮಾಡಬೇಕಾದ ವಸ್ತ್ರಗಳು ಇವೇ: ಎದೆಪದಕವು ಎಫೋದ ನಿಲುವಂಗಿ ಕಸೂತಿಯ ಕೆಲಸದ ಮೇಲಂಗಿ ಮುಂಡಾಸ ನಡುಕಟ್ಟು; ನಿನ್ನ ಸಹೋದರ ನಾದ ಆರೋನನೂ ಅವನ ಕುಮಾರರೂ ನನಗೆ ಯಾಜಕ ಸೇವೆಮಾಡುವದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮಾಡಬೇಕಾದ ವಸ್ತ್ರಗಳು ಯಾವವಂದರೆ - ಪದಕದ ಚೀಲ ಮಹಾಯಾಜಕ ಕವಚ ಮೇಲಂಗಿ ವಿಚಿತ್ರವಾದ ನಿಲುವಂಗಿ ಮುಂಡಾಸ ನಡುಕಟ್ಟು ಇವುಗಳೇ. ನಿನ್ನ ಅಣ್ಣನಾದ ಆರೋನನೂ ಅವನ ಮಕ್ಕಳೂ ನನ್ನ ಯಾಜಕರಾಗುವದಕ್ಕೆ ಅವರಿಗೋಸ್ಕರ ಈ ದೀಕ್ಷಾವಸ್ತ್ರಗಳನ್ನು ಮಾಡಿಸಬೇಕು.
Kannada Bible (KNCL) BSI 2016
ತಯಾರಿಸಬೇಕಾದ ವಸ್ತ್ರಗಳು ಇವು: ಎದೆಕವಚ, ಏಫೋದ್ ಕವಚ, ಮೇಲಂಗಿ, ಕಸೂತಿ ನಿಲುವಂಗಿ, ಗುರುಪೇಟ ಮತ್ತು ನಡುಕಟ್ಟು, ನಿನ್ನ ಅಣ್ಣ ಆರೋನನು ಮತ್ತು ಅವನ ಮಕ್ಕಳು ನನ್ನ ಯಾಜಕರಾಗಿ ಸೇವೆ ಮಾಡುವಂತೆ ಅವರಿಗೆ ಈ ದೀಕ್ಷಾವಸ್ತ್ರಗಳನ್ನು ಮಾಡಿಸು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಮಾಡಬೇಕಾದ ವಸ್ತ್ರಗಳು ಇವು: ಎದೆಪದಕವು, ಏಫೋದ್, ನಿಲುವಂಗಿ, ಕಸೂತಿಯ ಕೆಲಸದ ಮೇಲಂಗಿ, ಮುಂಡಾಸ, ನಡುಕಟ್ಟು. ನಿನ್ನ ಸಹೋದರನಾದ ಆರೋನನೂ ಅವನ ಪುತ್ರರೂ ನನ್ನ ಯಾಜಕರಾಗಿ ಸೇವೆ ಮಾಡುವುದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಿಸು.