Exodus 28:41 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ ಸಹೋದರನಾದ ಆರೋನನಿಗೆ ಮತ್ತು ಅವನ ಗಂಡುಮಕ್ಕಳಿಗೆ ಬಟ್ಟೆಗಳನ್ನು ತೊಡಿಸು. ಬಳಿಕ ಅವರನ್ನು ಯಾಜಕರನ್ನಾಗಿ ಮಾಡಲು ವಿಶೇಷ ತೈಲದಿಂದ ಅಭಿಷೇಕಿಸು. ಇದು ಅವರನ್ನು ಪ್ರತಿಷ್ಠಿಸುವುದು ಮತ್ತು ಪವಿತ್ರರನ್ನಾಗಿ ಮಾಡುವುದು. ಅವರು ಯಾಜಕರಾಗಿ ನನ್ನ ಸೇವೆ ಮಾಡುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ನನಗೆ ಯಾಜಕಸೇವೆ ಮಾಡುವುದಕ್ಕಾಗಿ ಆ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ, ಅವನ ಮಕ್ಕಳಿಗೂ ತೊಡಿಸಿ, ಅವರನ್ನು ಅಭಿಷೇಕಿಸಿ, ಸೇವೆಗಾಗಿ ಪ್ರತಿಷ್ಠಿಸಿ ಶುದ್ಧೀಕರಿಸಿಬೇಕು.
Kannada BSI Bible 2016
ಅವುಗಳನ್ನು ನಿನ್ನ ಸಹೋದರನಾದ ಆರೋನ ನಿಗೂ ಅವನ ಕುಮಾರರಿಗೂ ತೊಡಿಸಿ ಅವರನ್ನು ಅಭಿಷೇಕಿಸಿ ಪ್ರತಿಷ್ಠೆಮಾಡು. ಅವರು ನನಗೆ ಯಾಜಕ ಸೇವೆಮಾಡುವ ಹಾಗೆ ಅವರನ್ನು ಶುದ್ಧಮಾಡು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ ಅವನ ಮಕ್ಕಳಿಗೂ ತೊಡಿಸಿ ಅವರನ್ನು ಅಭಿಷೇಕಿಸಿ ಉದ್ಯೋಗಕ್ಕೆ ಸೇರಿಸಿ ಪ್ರತಿಷ್ಠಿಸಬೇಕು; ಆಗ ಅವರು ನನಗೆ ಯಾಜಕರಾಗಿರುವರು.
Kannada Bible (KNCL) BSI 2016
ಈ ಬಗೆಯ ವಸ್ತ್ರಗಳನ್ನು ನಿನ್ನ ಅಣ್ಣನಾದ ಆರೋನನಿಗೂ ಅವನ ಮಕ್ಕಳಿಗೂ ತೊಡಿಸಿ, ಅವರನ್ನು ಅಭಿಷೇಕಿಸಿ, ಉದ್ಯೋಗಕ್ಕೆ ಸೇರಿಸಿ ಪ್ರತಿಷ್ಠಿಸು. ಆಗ ಅವರು ನನಗೆ ಯಾಜಕರಾಗಿರುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವುಗಳನ್ನು ನಿನ್ನ ಸಹೋದರ ಆರೋನನ ಮತ್ತು ಅವನ ಪುತ್ರರಿಗೆ ತೊಡಿಸಿ, ಅವರನ್ನು ಅಭಿಷೇಕಿಸಿ, ಪ್ರತಿಷ್ಠೆ ಮಾಡು. ಅವರು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವರನ್ನು ಶುದ್ಧಮಾಡು.