Exodus 28:43 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆರೋನನು ಮತ್ತು ಅವನ ಗಂಡುಮಕ್ಕಳು ದೇವದರ್ಶನ ಗುಡಾರದೊಳಗೆ ಪ್ರವೇಶಿಸುವಾಗಲೆಲ್ಲಾ ಈ ಉಡುಪುಗಳನ್ನು ಧರಿಸಿಕೊಳ್ಳಬೇಕು. ಪವಿತ್ರಸ್ಥಳದಲ್ಲಿ ಯಾಜಕರಾಗಿ ಸೇವೆಮಾಡಲು ಯಜ್ಞವೇದಿಕೆಯ ಬಳಿಗೆ ಬರುವಾಗ ಅವರು ಈ ಬಟ್ಟೆಗಳನ್ನು ಧರಿಸಿಕೊಂಡಿರಬೇಕು. ಅವರು ಈ ಉಡುಪುಗಳನ್ನು ಧರಿಸಿಕೊಳ್ಳದಿದ್ದರೆ, ದೋಷಿಗಳಾಗಿ ಸಾಯುವರು. ಇವುಗಳೆಲ್ಲಾ ಆರೋನನಿಗೂ ಅವನ ನಂತರ ಅವನ ಕುಟುಂಬಸ್ಥರೆಲ್ಲರಿಗೂ ಶಾಶ್ವತವಾದ ಕಟ್ಟಳೆಯಾಗಿವೆ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆರೋನನೂ, ಅವನ ಮಕ್ಕಳೂ ದೇವದರ್ಶನ ಗುಡಾರದೊಳಗೆ ಹೋಗುವಾಗಲೂ, ಪವಿತ್ರಸ್ಥಾನದಲ್ಲಿ ಸೇವೆಮಾಡುವುದಕ್ಕೆ ಯಜ್ಞವೇದಿಯ ಹತ್ತಿರಕ್ಕೆ ಬರುವಾಗಲೂ ಇವುಗಳನ್ನು ಧರಿಸಿಕೊಂಡಿರಬೇಕು. ಇಲ್ಲವಾದರೆ ಅವರು ಆ ಅಪರಾಧದ ಫಲವನ್ನು ಅನುಭವಿಸಿ ಸತ್ತಾರು. ಅವನಿಗೂ ಅವನ ವಂಶಸ್ಥರಿಗೂ ಇದು ಶಾಶ್ವತವಾದ ನಿಯಮವಾಗಿದೆ.
Kannada BSI Bible 2016
ಆರೋನನೂ ಅವನ ಕುಮಾರರೂ ಸಭೆಯ ಗುಡಾರಕ್ಕೆ ಹೋಗುವಾಗಲೂ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವದಕ್ಕೆ ಯಜ್ಞವೇದಿಯ ಸವಿಾಪಕ್ಕೆ ಬರುವಾಗಲೂ ತಮ್ಮ ಅಕ್ರಮವನ್ನು ಹೊತ್ತು ಸಾಯದ ಹಾಗೆ ಇವುಗಳನ್ನು ಹಾಕಿಕೊಂಡಿರಬೇಕು. ಇದೇ ಅವನಿಗೂ ಅವನ ತರುವಾಯ ಅವನ ಸಂತತಿಯ ವರಿಗೂ ಇರಬೇಕಾದ ನಿತ್ಯವಾದ ಕಟ್ಟಳೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆರೋನನೂ ಅವನ ಮಕ್ಕಳೂ ದೇವದರ್ಶನದ ಗುಡಾರದೊಳಗೆ ಹೋಗುವಾಗಲೂ ಪವಿತ್ರಸ್ಥಾನದಲ್ಲಿ ಸೇವೆಮಾಡುವದಕ್ಕೆ ಯಜ್ಞವೇದಿಯ ಹತ್ತಿರಕ್ಕೆ ಬರುವಾಗಲೂ ಇವುಗಳನ್ನು ಹಾಕಿಕೊಂಡಿರಬೇಕು. ಇಲ್ಲವಾದರೆ ಅವರು ಆ ಅಪರಾಧದ ಫಲವನ್ನು ಅನುಭವಿಸಿ ಸತ್ತಾರು. ಅವನಿಗೂ ಅವನ ವಂಶಸ್ಥರಿಗೂ ಇದು ಶಾಶ್ವತವಾದ ನಿಯಮ.
Kannada Bible (KNCL) BSI 2016
ಆರೋನನು ಮತ್ತು ಅವನ ಮಕ್ಕಳು ದೇವದರ್ಶನದ ಗುಡಾರದೊಳಗೆ ಬರುವಾಗ ಹಾಗು ಪವಿತ್ರಸ್ಥಾನದಲ್ಲಿ ಸೇವೆ ಮಾಡಲು ಬಲಿಪೀಠದ ಹತ್ತಿರ ಬರುವಾಗ ಇವುಗಳನ್ನು ಹಾಕಿಕೊಂಡಿರಲಿ. ಇಲ್ಲವಾದರೆ ಅವರು ಆ ಅಪರಾಧದ ನಿಮಿತ್ತ ಸಾಯುವರು. ಆರೋನನಿಗೂ ಅವನ ವಂಶಸ್ಥರಿಗೂ ಇದು ಶಾಶ್ವತವಾದ ನಿಯಮ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆರೋನನೂ ಅವನ ಪುತ್ರರೂ ದೇವದರ್ಶನದ ಗುಡಾರಕ್ಕೆ ಬರುವ ಸಮಯದಲ್ಲಿಯೂ ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಬಲಿಪೀಠದ ಸಮೀಪಕ್ಕೆ ಬರುವ ಸಮಯದಲ್ಲಿಯೂ ದೋಷವನ್ನು ಹೊತ್ತು ಸಾಯದ ಹಾಗೆ ಇವುಗಳನ್ನು ಹಾಕಿಕೊಂಡಿರಬೇಕು. “ಇದೇ ಆರೋನನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಇರಬೇಕಾದ ನಿತ್ಯವಾದ ಕಟ್ಟಳೆ.