Exodus 28:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಏಫೋದನ್ನು ಚಿನ್ನದ ದಾರಗಳು, ನಾರಿನಬಟ್ಟೆ, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಉಪಯೋಗಿಸಿ ಚಾಣಾಕ್ಷತೆಯಿಂದ ಹೆಣೆದು ತಯಾರಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಏಫೋದೆಂಬ ಕವಚವನ್ನು ನಯವಾಗಿ ಹೊಸೆದ ಹತ್ತಿಯ ದಾರದಿಂದ ಮಾಡಿಸಿ ಅದನ್ನು ಚಿನ್ನ, ನೀಲಿ, ನೇರಳೆ ಹಾಗೂ ಕಡುಗೆಂಪು ದಾರಗಳಿಂದಲೂ ಕಸೂತಿ ಹಾಕಿಸಿ ಅಲಂಕರಿಸಬೇಕು.
Kannada BSI Bible 2016
ಎಫೋದನ್ನು ಬಂಗಾರದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿನಿಂದಲೂ ನಯವಾದ ಹೊಸೆದ ನಾರಿನಿಂದಲೂ ಕುಶಲ ಕಲೆಯಿಂದಲೂ ಮಾಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಏಫೋದೆಂಬ ಮಹಾಯಾಜಕ ಕವಚವನ್ನು ಹುರಿನಾರಿನ ಬಟ್ಟೆಯಿಂದ ಮಾಡಿಸಿ ಚಿನ್ನದ ದಾರದಿಂದಲೂ ನೀಲಿ ಧೂಮ್ರ ರಕ್ತವರ್ಣಗಳುಳ್ಳ ದಾರದಿಂದಲೂ ಬುಟೇದಾರೀ ಕೆಲಸದವರ ಕೈಯಿಂದ ಅಲಂಕರಿಸಬೇಕು.
Kannada Bible (KNCL) BSI 2016
‘ಏಫೋದ್’ ಎಂಬ ಕವಚವನ್ನು ಹುರಿನಾರಿನ ಬಟ್ಟೆಯಿಂದ ಮಾಡಿಸು. ಚಿನ್ನದ ದಾರದಿಂದಲೂ ಹಾಗು ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದವರು ಅದನ್ನು ಅಲಂಕರಿಸಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಏಫೋದನ್ನು ಬಂಗಾರ, ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸ ಮಾಡಬೇಕು.