Exodus 29:35 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನಾನು ನಿನಗೆ ಆಜ್ಞಾಪಿಸಿದ ಇವುಗಳನ್ನೆಲ್ಲ ಆರೋನ ಮತ್ತು ಅವನ ಪುತ್ರರಿಗೋಸ್ಕರ ಮಾಡು. ಅವರನ್ನು ಯಾಜಕರನ್ನಾಗಿ ನೇಮಿಸುವ ಸಮಾರಂಭವು ಏಳು ದಿನಗಳವರೆಗೆ ನಡೆಯಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲಿ ಏಳು ದಿನಗಳ ಕಾಲ ಹೀಗೆ ಅವರನ್ನು ಪ್ರತ್ಯೇಕಿಸಿ ಪ್ರತಿಷ್ಠಿಸಬೇಕು. ಆರೋನನನ್ನೂ ಅವನ ಮಕ್ಕಳನ್ನೂ ಸೇವೆಗೆ ಪ್ರತಿಷ್ಠಿಸಬೇಕು.
Kannada BSI Bible 2016
ಹೀಗೆ ಆರೋನನಿಗೂ ಅವನ ಕುಮಾರರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರ ನಡಿಸಿ ಏಳು ದಿವಸ ಅವರನ್ನು ಪ್ರತಿಷ್ಠೆಮಾಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲಿ ಏಳು ದಿವಸದ ಆಚಾರವನ್ನು ನಡಿಸಿ ಆರೋನನನ್ನೂ ಅವನ ಮಕ್ಕಳನ್ನೂ ಉದ್ಯೋಗಕ್ಕೆ ಸೇರಿಸಬೇಕು;
Kannada Bible (KNCL) BSI 2016
ನಾನು ನಿನಗೆ ಆಜ್ಞಾಪಿಸಿದ ರೀತಿಯಲ್ಲಿ ಏಳು ದಿವಸದ ಆಚರಣೆಯನ್ನು ನಡೆಸಿ ಆರೋನ ಮತ್ತು ಅವನ ಮಕ್ಕಳನ್ನು ಯಾಜಕ ಸೇವೆಗೆ ಅಭಿಷೇಕಿಸು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಹೀಗೆ ಆರೋನನಿಗೂ ಅವನ ಪುತ್ರಿರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರಮಾಡಿ, ಏಳು ದಿವಸ ಅವರನ್ನು ಪ್ರತಿಷ್ಠೆ ಕ್ರಮವನ್ನು ಮಾಡಬೇಕು.