Exodus 3:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಪ್ರತಿಯೊಬ್ಬ ಇಬ್ರಿಯ ಸ್ತ್ರೀಯು ಈಜಿಪ್ಟಿನ ನೆರೆಯವರನ್ನಾಗಲಿ ಅಥವಾ ತನ್ನ ಮನೆಯಲ್ಲಿ ವಾಸಿಸುತ್ತಿರುವ ಯಾವುದೇ ಸ್ತ್ರೀಯನ್ನಾಗಲಿ ಕೇಳಿದರೆ ಅವರು ಆಕೆಗೆ ಉಡುಗೊರೆಗಳನ್ನು ಕೊಡುವರು. ನಿನ್ನ ಜನರು ಬೆಳ್ಳಿಬಂಗಾರಗಳನ್ನು, ಶ್ರೇಷ್ಠವಾದ ಬಟ್ಟೆಗಳನ್ನು ಪಡೆಯುವರು. ನೀವು ಈಜಿಪ್ಟನ್ನು ಬಿಡುವಾಗ ಆ ಉಡುಗೊರೆಗಳನ್ನು ನಿಮ್ಮ ಮಕ್ಕಳಿಗೆ ತೊಡಿಸುವಿರಿ. ಈ ರೀತಿಯಲ್ಲಿ ನೀವು ಈಜಿಪ್ಟಿನವರ ಐಶ್ವರ್ಯವನ್ನು ತೆಗೆದುಕೊಂಡು ಹೋಗುವಿರಿ” ಅಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮಲ್ಲಿನ ಪ್ರತಿಯೊಬ್ಬ ಸ್ತ್ರೀಯು ನೆರೆಹೊರೆಯ ಹೆಂಗಸರಿಂದಲೂ, ನಿಮ್ಮ ಮನೆಗಳ ಅತಿಥಿಗಳಾಗಿ ತಂಗಿರುವ ಹೆಂಗಸರಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನೂ, ಬಟ್ಟೆಗಳನ್ನೂ ಕೇಳಿಕೊಳ್ಳಲಿ. ನೀವು ಅವುಗಳನ್ನು ನಿಮ್ಮ ಗಂಡು ಹೆಣ್ಣು ಮಕ್ಕಳಿಗೆ ತೊಡಿಸಿರಿ. ಹೀಗೆ ನೀವು ಐಗುಪ್ತ್ಯರನ್ನು ಸುಲಿಗೆ ಮಾಡಿಹೊರಟು ಬರುವಿರಿ” ಅಂದನು.
Kannada BSI Bible 2016
ಮನೆಯಲ್ಲಿ ಇಳು ಕೊಂಡಿರುವವಳಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನೂ ವಸ್ತ್ರಗಳನ್ನೂ ಕೇಳಿ ಕೊಳ್ಳಲಿ. ಅವುಗಳನ್ನು ನಿಮ್ಮ ಕುಮಾರ ಕುಮಾರ್ತೆ ಯರ ಮೇಲೆ ಹಾಕಿರಿ. ಹೀಗೆ ನೀವು ಐಗುಪ್ತ್ಯರನ್ನು ಸುಲುಕೊಳ್ಳುವಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮಲ್ಲಿ ಪ್ರತಿ ಸ್ತ್ರೀಯು ನೆರೇ ಹೆಂಗಸರಿಂದಲೂ ನಿಮ್ಮ ಮನೆಯಲ್ಲಿ ಇಳುಕೊಂಡ ಹೆಂಗಸರಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನೂ ಬಟ್ಟೆಗಳನ್ನೂ ಕೇಳಿಕೊಳ್ಳಲಿ. ನೀವು ಅವುಗಳನ್ನು ನಿಮ್ಮ ಗಂಡು ಹೆಣ್ಣು ಮಕ್ಕಳಿಗೆ ಇಡಿರಿ; ಇದರಿಂದ ಐಗುಪ್ತ್ಯರನ್ನು ಸೂರೆ ಮಾಡುವಿರಿ ಅಂದನು.
Kannada Bible (KNCL) BSI 2016
ನಿಮ್ಮ ಪ್ರತಿಯೊಬ್ಬ ಮಹಿಳೆ ನೆರೆಹೊರೆಯ ಮಹಿಳೆಯರಿಂದಲೂ ನಿಮ್ಮ ಮನೆಯಲ್ಲೇ ತಂಗಿರುವ ಮಹಿಳೆಯರಿಂದಲೂ ಬೆಳ್ಳಿಬಂಗಾರದ ಒಡವೆಗಳನ್ನು ಹಾಗು ಬಟ್ಟೆಬರೆಗಳನ್ನು ಕೇಳಿಕೊಳ್ಳಲಿ. ಅವುಗಳನ್ನು ನಿಮ್ಮ ಮಕ್ಕಳುಮರಿಗಳಿಗೆ ತೊಡಿಸಿರಿ. ಹೀಗೆ ಈಜಿಪ್ಟರನ್ನು ಸೂರೆಮಾಡಿ ಹೊರಡುವಿರಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಪ್ರತಿ ಸ್ತ್ರೀಯು ತನ್ನ ಮನೆಯಲ್ಲಿ ಇಳಿದುಕೊಂಡಿರುವ ಸ್ತ್ರೀಯಿಂದಲೂ ನೆರೆಯವಳಿಂದಲೂ ಬೆಳ್ಳಿಬಂಗಾರದ ಒಡವೆಗಳನ್ನು ಮತ್ತು ವಸ್ತ್ರಗಳನ್ನು ಕೇಳಿಕೊಳ್ಳಲಿ. ಅವುಗಳನ್ನು ನಿಮ್ಮ ಪುತ್ರಪುತ್ರಿಯರ ಮೇಲೆ ಹಾಕಿರಿ. ಹೀಗೆ ನೀವು ಈಜಿಪ್ಟಿನವರನ್ನು ಸೂರೆಮಾಡುವಿರಿ,” ಎಂದರು.