Exodus 3:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮೋಶೆಯು ಪೊದೆಯನ್ನು ನೋಡಲು ಬರುತ್ತಿರುವುದನ್ನು ಯೆಹೋವನು ನೋಡಿದನು. ದೇವರು ಆ ಪೊದೆಯೊಳಗಿಂದ, “ಮೋಶೆ, ಮೋಶೆ!” ಎಂದು ಕರೆದನು. ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಅದನ್ನು ನೋಡುವುದಕ್ಕೆ ಹತ್ತಿರ ಬರುವುದನ್ನು ಯೆಹೋವನು ಕಂಡನು. ಆಗ ದೇವರು ಆ ಪೊದೆಯೊಳಗಿಂದ “ಮೋಶೆಯೇ, ಮೋಶೆಯೇ” ಎಂದು ಅವನನ್ನು ಕರೆದನು. ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು.
Kannada BSI Bible 2016
ಅವನು ನೋಡು ವದಕ್ಕೆ ಹತ್ತಿರ ಬರುವದನ್ನು ಕರ್ತನು ನೋಡಿದಾಗ ದೇವರು ಪೊದೆಯೊಳಗಿಂದ ಅವನಿಗೆ--ಮೋಶೆಯೇ, ಮೋಶೆಯೇ ಎಂದು ಕರೆದನು; ಆಗ ಅವನು--ನಾನು ಇಲ್ಲಿ ಇದ್ದೇನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೋಡುವದಕ್ಕೆ ಅವನು ದಾರಿ ಬಿಟ್ಟದ್ದನ್ನು ಯೆಹೋವನು ಕಂಡನು. ದೇವರು ಆ ಪೊದೆಯೊಳಗಿಂದ - ಮೋಶೆಯೇ, ಮೋಶೆಯೇ ಎಂದು ಕರೆದನು. ಅದಕ್ಕವನು - ಇಗೋ, ಇದ್ದೇನೆ ಅಂದನು.
Kannada Bible (KNCL) BSI 2016
ಅದನ್ನು ನೋಡಲು ಅವನು ಮುಂದಕ್ಕೆ ಬರುವುದನ್ನು, ಸರ್ವೇಶ್ವರ ಸ್ವಾಮಿ ಕಂಡರು. ಪೊದೆಯೊಳಗಿಂದ, “ಮೋಶೇ, ಮೋಶೇ,” ಎಂದು ದೇವರು ಕರೆದರು. ಅದಕ್ಕವನು, “ಇಗೋ, ಇದ್ದೇನೆ,” ಎಂದು ಉತ್ತರಕೊಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ನೋಡುವುದಕ್ಕೆ ಹತ್ತಿರ ಬರುವುದನ್ನು ಯೆಹೋವ ದೇವರು ನೋಡಿದಾಗ, ದೇವರು ಪೊದೆಯೊಳಗಿಂದ ಅವನಿಗೆ, “ಮೋಶೇ, ಮೋಶೇ,” ಎಂದು ಕರೆದರು. ಆಗ ಅವನು, “ನಾನು ಇಲ್ಲಿ ಇದ್ದೇನೆ,” ಎಂದನು.