Exodus 30:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಇಸ್ರೇಲರನ್ನು ಲೆಕ್ಕಿಸು. ಹೀಗಾಗಿ ಎಷ್ಟು ಮಂದಿ ಜನರಿರುತ್ತಾರೆಂದು ನೀನು ತಿಳಿದುಕೊಳ್ಳುವೆ. ಪ್ರತಿಸಾರಿ ಇದನ್ನು ಮಾಡಿದಾಗ, ಪ್ರತಿಯೊಬ್ಬನು ತನಗೋಸ್ಕರವಾಗಿ ಯೆಹೋವನಿಗೆ ತೆರಿಗೆಯನ್ನು ಕೊಡಬೇಕು. ಆಗ ಜನರಿಗೆ ಯಾವ ಕೇಡುಗಳೂ ಉಂಟಾಗುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀನು ಇಸ್ರಾಯೇಲ್ಯರ ಜನಗಣತಿ ಮಾಡಿಸಿ ಅವರನ್ನು ಲೆಕ್ಕಿಸುವಾಗ ಅವರಿಗೆ ಬಾಧೆಯುಂಟಾಗಿ ವ್ಯಾಧಿ ಸಂಭವಿಸದಂತೆ ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣಕ್ಕಾಗಿ ವಿಮೋಚನ ಕ್ರಯವನ್ನು ಯೆಹೋವನಿಗೆ ಕೊಡಬೇಕು.
Kannada BSI Bible 2016
ನೀನು ಇಸ್ರಾಯೇಲ್ ಮಕ್ಕಳ ಲೆಕ್ಕವನ್ನು ಅದರ ಸಂಖ್ಯೆಗೆ ಸರಿಯಾಗಿ ಎಣಿಸಿದಾಗ ಅವರಲ್ಲಿ ವ್ಯಾಧಿ ಉಂಟಾಗದ ಹಾಗೆ ಅವರನ್ನು ಕ್ರಮವಾಗಿ ಎಣಿಸಿ ಒಬ್ಬೊಬ್ಬನು ತನ್ನ ಪ್ರಾಣದ ವಿಮೋಚನೆಯ ಕ್ರಮವನ್ನು ಕರ್ತನಿಗೆ ಕೊಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಖಾನೇಷುಮಾರಿಯಾಗತಕ್ಕ ಇಸ್ರಾಯೇಲ್ಯರನ್ನು ಲೆಕ್ಕಿಸುವಾಗ ಅವರೊಳಗೆ ವ್ಯಾಧಿಸಂಭವಿಸದಂತೆ ಪ್ರತಿಯೊಬ್ಬನು ತನ್ನ ತನ್ನ ಪ್ರಾಣಕ್ಕೆ ಈಡಾಗಿ ಯೆಹೋವನಿಗೆ ಕಪ್ಪವನ್ನು ಕೊಡಬೇಕು.
Kannada Bible (KNCL) BSI 2016
“ನೀನು ಇಸ್ರಯೇಲರ ಜನಗಣತಿ ಮಾಡುವಾಗ ಲೆಕ್ಕಿಸಬೇಕಾದ ಪ್ರತಿಯೊಬ್ಬನು ತನ್ನ ತನ್ನ ಪ್ರಾಣಕ್ಕೆ ಈಡಾಗಿ ಸರ್ವೇಶ್ವರನಾದ ನನಗೆ ತೆರಿಗೆಯನ್ನು ಕೊಡಬೇಕು. ಆಗ ಅವರಿಗೆ ಯಾವ ವಿಪತ್ತು ಸಂಭವಿಸದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನೀನು ಇಸ್ರಾಯೇಲರನ್ನು ಎಣಿಸಲು ಜನಗಣತಿಯನ್ನು ತೆಗೆದುಕೊಂಡಾಗ ಪ್ರತಿಯೊಬ್ಬನು ತನ್ನ ಜೀವನದ ವಿಮೋಚನೆಯ ಕ್ರಯವನ್ನು ಯೆಹೋವ ದೇವರಿಗೆ ಕೊಡಬೇಕು. ಈ ರೀತಿ ಮಾಡಿದಲ್ಲಿ ಅವರನ್ನು ಎಣಿಸುವಾಗ ಅವರಲ್ಲಿ ವ್ಯಾಧಿ ಉಂಟಾಗುವುದಿಲ್ಲ.