Exodus 30:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಲೆಕ್ಕಿಸಲ್ಪಟ್ಟವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೆ ಮೇಲ್ಪಟ್ಟವರೂ ಈ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಲೆಕ್ಕ ಮಾಡಿದವರಲ್ಲಿ ಇಪ್ಪತ್ತು ವರ್ಷದವರೂ ಹಾಗೂ ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳವರೂ ಆ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು.
Kannada BSI Bible 2016
ಕ್ರಮವಾಗಿ ಲೆಕ್ಕಿಸಲ್ಪಟ್ಟವರಲ್ಲಿ ಸೇರುವ ಪ್ರತಿ ಮನು ಷ್ಯನು ಇಪ್ಪತ್ತು ವರುಷ ಮೊದಲುಗೊಂಡು ಅದಕ್ಕೆ ಮೇಲಾದ ಪ್ರಾಯವುಳ್ಳವರು ಕರ್ತನಿಗೆ ಕಾಣಿಕೆಯನ್ನು ಕೊಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಲೆಕ್ಕಿಸಲ್ಪಟ್ಟವರಲ್ಲಿ ಸೇರಿದವರೊಳಗೆ ಇಪ್ಪತ್ತು ವರುಷದವರೂ ಅದಕ್ಕೆ ಹೆಚ್ಚಿನ ವಯಸ್ಸುಳ್ಳವರೂ ಆ ಕಪ್ಪವನ್ನು ಯೆಹೋವನಿಗೆ ಕೊಡಬೇಕು.
Kannada Bible (KNCL) BSI 2016
ಜನಗಣತಿಯಲ್ಲಿ ಸೇರಿಸಲಾದ ಇಪ್ಪತ್ತು ವರ್ಷದ ಹಾಗು ಅದಕ್ಕೂ ಹೆಚ್ಚು ವಯಸ್ಸಿನವರು ಈ ತೆರಿಗೆಯನ್ನು ನನಗೆ ಕಟ್ಟಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಲೆಕ್ಕಿತರಾದವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೂ ಹೆಚ್ಚು ಪ್ರಾಯವುಳ್ಳವರೂ ಯೆಹೋವ ದೇವರಿಗೆ ಕಾಣಿಕೆಯನ್ನು ಕೊಡಬೇಕು.