Exodus 32:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆರೋನನು ಅವರಿಗೆ, “ನಿಮ್ಮ ಹೆಂಡತಿಯ ಮತ್ತು ಗಂಡು ಹೆಣ್ಣುಮಕ್ಕಳಲ್ಲಿರುವ ಚಿನ್ನದ ಓಲೆಗಳನ್ನು ತಂದು ನನಗೆ ಕೊಡಿರಿ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದಕ್ಕೆ ಆರೋನನು ಅವರಿಗೆ, “ನಿಮ್ಮ ಹೆಂಡತಿಯರ ಹಾಗು ಗಂಡುಹೆಣ್ಣು ಮಕ್ಕಳ ಕಿವಿಯಲ್ಲಿ ಹಾಕಿಕೊಂಡಿರುವ ಚಿನ್ನದ ಓಲೆಗಳನ್ನು ಬಿಚ್ಚಿ ನನಗೆ ಒಪ್ಪಿಸಿರಿ” ಎಂದು ಹೇಳಿದನು.
Kannada BSI Bible 2016
ಅದಕ್ಕೆ ಆರೋನನು ಅವರಿಗೆ--ನಿಮ್ಮ ಹೆಂಡತಿಯರ ಮತ್ತು ನಿಮ್ಮ ಕುಮಾರ ಕುಮಾರ್ತೆಯರ ಕಿವಿಗಳಲ್ಲಿರುವ ಚಿನ್ನದ ವಾಲೆಗಳನ್ನು ಕಿತ್ತು ನನ್ನ ಬಳಿಗೆ ತನ್ನಿರಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದಕ್ಕೆ ಆರೋನನು - ನಿಮ್ಮ ಹೆಂಡರೂ ಗಂಡುಮಕ್ಕಳೂ ಹೆಣ್ಣುಮಕ್ಕಳೂ ಕಿವಿಗೆ ಹಾಕಿಕೊಂಡಿರುವ ಚಿನ್ನದ ಮುರುವುಗಳನ್ನು ನೀವು ಕಿತ್ತು ನನಗೆ ಒಪ್ಪಿಸಿರಿ ಎಂದು ಹೇಳಲಾಗಿ
Kannada Bible (KNCL) BSI 2016
ಅದಕ್ಕೆ ಆರೋನನು, “ನಿಮ್ಮ ಹೆಂಡತಿಯರು, ಗಂಡುಮಕ್ಕಳು ಹಾಗು ಹೆಣ್ಣುಮಕ್ಕಳು ಹಾಕಿಕೊಂಡಿರುವ ಚಿನ್ನದ ಕಿವಿಯೋಲೆಗಳನ್ನು ಬಿಚ್ಚಿ ನನಗೆ ಒಪ್ಪಿಸಿರಿ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಆರೋನನು ಅವರಿಗೆ, “ನಿಮ್ಮ ಹೆಂಡತಿಯರ ಮತ್ತು ನಿಮ್ಮ ಪುತ್ರಪುತ್ರಿಯರ ಕಿವಿಗಳಲ್ಲಿರುವ ಚಿನ್ನದ ವಾಲೆಗಳನ್ನು ಬಿಚ್ಚಿ ನನ್ನ ಬಳಿಗೆ ತನ್ನಿರಿ,” ಎಂದನು.