Exodus 34:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಯೆಹೋವನು, “ನಾನು ನಿಮ್ಮೊಂದಿಗೆ ಈ ಒಡಂಬಡಿಕೆಯನ್ನು ಮಾಡುತ್ತಿದ್ದೇನೆ. ಭೂಲೋಕದಲ್ಲಿ ಎಲ್ಲಿಯೇ ಆಗಲಿ ಯಾವ ಜನಾಂಗದಲ್ಲಿಯೇ ಆಗಲಿ ಹಿಂದೆಂದೂ ನಡೆಯದಂತ ಮಹತ್ಕಾರ್ಯಗಳನ್ನು ಮಾಡುವೆನು. ಎಲ್ಲಾ ಜನರು ಮತ್ತು ನಿನ್ನೊಂದಿಗಿರುವ ಜನರು ಇವುಗಳನ್ನು ನೋಡಿ ಯೆಹೋವನಾದ ನಾನೇ ಮಹಾ ಮಹಿಮಸ್ವರೂಪನೆಂದು ತಿಳಿದುಕೊಳ್ಳುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಹೇಳಿದ್ದೇನೆಂದರೆ, “ಕೇಳು, ನಾನು ಒಂದು ಒಡಂಬಡಿಕೆಯನ್ನು ಸ್ಥಾಪಿಸುತ್ತೇನೆ, ಲೋಕದಲ್ಲಿ ಎಲ್ಲಿಯೂ ಯಾವ ಜನಾಂಗದಲ್ಲಿಯಾದರೂ ನಡೆಯದಂಥ ಮಹತ್ಕಾರ್ಯಗಳನ್ನು ನಿನ್ನ ಜನರೆಲ್ಲರು ನೋಡುವಂತೆ ನಡೆಸುವೆನು. ನಿಮ್ಮ ಸುತ್ತಮುತ್ತಲಿರುವ ಎಲ್ಲಾ ಜನರೂ ಯೆಹೋವನು ಮಾಡುವ ಮಹತ್ಕಾರ್ಯವನ್ನು ನೋಡುವರು. ನಾನು ನಿಮ್ಮ ವಿಷಯದಲ್ಲಿ ಮಾಡಬೇಕೆಂದಿರುವುದು ಭಯಂಕರವಾದದ್ದಾಗಿದೆ.
Kannada BSI Bible 2016
ಅದಕ್ಕೆ ಕರ್ತನು--ಇಗೋ, ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ಸಮಸ್ತ ಭೂಮಿ ಯಲ್ಲಿಯೂ ಯಾವ ಜನಾಂಗದಲ್ಲಿಯೂ ಮಾಡ ದಿರುವಂಥ ಅದ್ಭುತಗಳನ್ನು ನಿನ್ನ ಜನರೆಲ್ಲರ ಮುಂದೆ ಮಾಡುವೆನು. ನೀನು ಯಾರ ಮಧ್ಯದಲ್ಲಿ ಇರುವಿಯೋ ಆ ಜನರೆಲ್ಲರು ಕರ್ತನ ಕಾರ್ಯವನ್ನು ನೋಡುವರು. ನಾನು ನಿಮಗೆ ಮಾಡುವಂಥದ್ದು ಭಯಂಕರ ವಾಗಿರುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಹೇಳಿದ್ದೇನಂದರೆ - ನಾನು ಒಂದು ನಿಬಂಧನೆಯನ್ನು ಸ್ಥಾಪಿಸುತ್ತೇನೆ, ಕೇಳು; ಲೋಕದಲ್ಲಿ ಎಲ್ಲಿಯೂ ಯಾವ ಜನಾಂಗದಲ್ಲಿಯಾದರೂ ನಡೆಯದಂಥ ಮಹತ್ಕಾರ್ಯಗಳನ್ನು ನಿನ್ನ ಜನರೆಲ್ಲರು ನೋಡುವಂತೆ ನಡಿಸುವೆನು. ನಿಮ್ಮ ಸುತ್ತಮುತ್ತಲಿರುವ ಎಲ್ಲಾ ಜನರೂ ಯೆಹೋವನು ಮಾಡುವ ಮಹತ್ಕಾರ್ಯವನ್ನು ನೋಡುವರು. ನಾನು ನಿಮ್ಮ ವಿಷಯದಲ್ಲಿ ಮಾಡಬೇಕೆಂದಿರುವದು ಭಯಂಕರವಾದದ್ದು.
Kannada Bible (KNCL) BSI 2016
ಸರ್ವೇಶ್ವರ ಮೋಶೆಗೆ, “ಕೇಳು, ನಾನೊಂದು ಒಡಂಬಡಿಕೆಯನ್ನು ಮಾಡುತ್ತೇನೆ. ಜಗದಲ್ಲಿ ಯಾವ ನಾಡಿನಲ್ಲೂ ಯಾವ ಜನಾಂಗದಲ್ಲೂ ನಡೆಯದಂಥ ಮಹಾತ್ಕಾರ್ಯಗಳನ್ನು ನಿನ್ನ ಜನರೆಲ್ಲರು ನೋಡುವಂತೆ ನಡೆಸುವೆನು. ನಿಮ್ಮ ಸುತ್ತಮುತ್ತಲಿರುವ ಜನರೆಲ್ಲರು ಸರ್ವೇಶ್ವರನಾದ ನಾನು ಮಾಡುವ ಮಹಾತ್ಕಾರ್ಯವನ್ನು ನೋಡುವರು. ನಾನು ನಿಮ್ಮ ವಿಷಯದಲ್ಲಿ ಮಾಡಬೇಕೆಂದಿರುವುದು ಅದ್ಭುತಕರವಾದುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದಕ್ಕೆ ಯೆಹೋವ ದೇವರು, “ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ಸಮಸ್ತ ಭೂಮಿಯಲ್ಲಿಯೂ ಯಾವ ಜನಾಂಗದಲ್ಲಿಯೂ ಹಿಂದೆಂದಿಗೂ ಮಾಡದಿರುವಂಥ ಅದ್ಭುತಗಳನ್ನು ನಿನ್ನ ಎಲ್ಲಾ ಜನರ ಮುಂದೆ ಮಾಡುವೆನು. ನೀನು ಯಾರ ಮಧ್ಯದಲ್ಲಿ ಇರುವೆಯೋ ಆ ಜನರೂ ಯೆಹೋವ ದೇವರ ಕಾರ್ಯವನ್ನು ನೋಡುವರು ಏಕೆಂದರೆ ನಾನು ನಿಮಗೆ ಮಾಡುವಂಥದ್ದು ಭಯಂಕರವಾಗಿರುವುದು.