Exodus 34:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಚೊಚ್ಚಲಾಗಿ ಹುಟ್ಟಿದ ಕತ್ತೆಯನ್ನು ನೀವು ಇಟ್ಟುಕೊಳ್ಳಲು ಬಯಸಿದರೆ, ಆಗ ನೀವು ಕುರಿಮರಿಯನ್ನು ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಆದರೆ ನೀವು ಅದನ್ನು ಕೊಂಡುಕೊಳ್ಳದಿದ್ದರೆ, ಅದರ ಕುತ್ತಿಗೆಯನ್ನು ಮುರಿದು ಕೊಂದುಬಿಡಬೇಕು. ನೀವು ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನನ್ನಿಂದ ಕೊಂಡುಕೊಳ್ಳಬೇಕು. ಯಾವ ವ್ಯಕ್ತಿಯೂ ಕಾಣಿಕೆಯಿಲ್ಲದೆ, ನನ್ನ ಸನ್ನಿಧಿಗೆ ಬರಕೂಡದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕತ್ತೆಯ ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೆಮರಿಯನ್ನು ಬಿಡಿಸಬಹುದು; ಹಾಗೆ ಬಿಡಿಸಲೊಲ್ಲದೆ ಹೋದರೆ ಅದರ ಕುತ್ತಿಗೆ ಮುರಿದು ಕೊಂದುಬಿಡಬೇಕು. ಆದರೆ ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ಬದಲು ಕೊಟ್ಟು ಬಿಡಿಸಿಕೊಳ್ಳಲೇ ಬೇಕು. ಒಬ್ಬರೂ ಬರಿಗೈಯಲ್ಲಿ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು.
Kannada BSI Bible 2016
ಕತ್ತೆಗಳಲ್ಲಿ ಗರ್ಭ ತೆರೆಯುವಂಥದ್ದನ್ನು ಕುರಿಮರಿ ಯಿಂದ ವಿಮೋಚಿಸಬೇಕು. ನೀನು ವಿಮೋಚಿಸದೆ ಹೋದರೆ ಅದರ ಕುತ್ತಿಗೆಯನ್ನು ಮುರಿಯಬೇಕು. ನಿನ್ನ ಕುಮಾರರ ಚೊಚ್ಚಲಾದವರನ್ನೆಲ್ಲಾ ವಿಮೋಚಿಸ ಬೇಕು. ನನ್ನ ಮುಂದೆ ಯಾರೂ ಬರೀಗೈಯಿಂದ ಕಾಣಿಸಿ ಕೊಳ್ಳಬಾರದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕತ್ತೆಯ ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೆಮರಿಯನ್ನು ಬಿಡಿಸಬಹುದು; ಹಾಗೆ ಬಿಡಿಸಲೊಲ್ಲದೆ ಹೋದರೆ ಅದರ ಕುತ್ತಿಗೆ ಮುರಿದು ಕೊಂದುಬಿಡಬೇಕು. ಆದರೆ ನಿಮ್ಮ ಚೊಚ್ಚಲು ಗಂಡುಮಗುವನ್ನು ಕೊಲ್ಲದೆ ಬದಲು ಕೊಟ್ಟು ಬಿಡಿಸಲೇಬೇಕು. ಒಬ್ಬರೂ ಕೈಯಲ್ಲಿ ಕಾಣಿಕೆಯಿಲ್ಲದೆ ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬಾರದು.
Kannada Bible (KNCL) BSI 2016
ಕತ್ತೆಯ ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ಆ ಕತ್ತೆಮರಿಯನ್ನು ಬಿಡಿಸಬಹುದು. ಹಾಗೆ ಬಿಡಿಸಲಾಗದೆ ಹೋದರೆ ಅದರ ಕುತ್ತಿಗೆ ಮುರಿದು ಕೊಂದುಬಿಡಬೇಕು. ಆದರೆ ನಿಮ್ಮ ಚೊಚ್ಚಲು ಗಂಡುಮಗುವನ್ನು ಕೊಲ್ಲದೆ, ಬದಲುಕೊಟ್ಟು ಬಿಡಿಸಲೇಬೇಕು. ಯಾರೂ ಬರೀಗೈಯಲ್ಲಿ ನನ್ನ ಮುಂದೆ ಕಾಣಿಸಿಕೊಳ್ಳಬಾರದು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕತ್ತೆಮರಿಗೆ ಬದಲಾಗಿ ಕುರಿಮರಿಯನ್ನು ವಿಮೋಚಿಸಬೇಕು. ನೀನು ವಿಮೋಚಿಸದೆ ಹೋದರೆ, ಕುತ್ತಿಗೆಯನ್ನು ಮುರಿಯಬೇಕು. ನಿನ್ನ ಪುತ್ರರಲ್ಲಿ ಚೊಚ್ಚಲಾದವರನ್ನೆಲ್ಲಾ ವಿಮೋಚಿಸಬೇಕು. “ನನ್ನ ಮುಂದೆ ಯಾರೂ ಬರಿಗೈಯಿಂದ ಕಾಣಿಸಿಕೊಳ್ಳಬಾರದು.