Exodus 34:27 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಹೇಳಿದ ಸಂಗತಿಗಳನ್ನೆಲ್ಲಾ ಬರೆ. ಆ ಸಂಗತಿಗಳು ನಾನು ನಿನ್ನೊಂದಿಗೆ ಮತ್ತು ಇಸ್ರೇಲರೊಂದಿಗೆ ಮಾಡಿದ ಒಡಂಬಡಿಕೆಯಾಗಿದೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಮೋಶೆಗೆ, “ನೀನು ಈ ವಾಕ್ಯಗಳನ್ನು ಬರೆ, ಏಕೆಂದರೆ ಈ ವಾಕ್ಯಗಳ ಮೇರೆಗೆ ನಿನ್ನ ಸಂಗಡಲೂ ಇಸ್ರಾಯೇಲರ ಸಂಗಡಲೂ ಒಡಂಬಡಿಕೆ ಮಾಡಿಕೊಂಡಿದ್ದೇನೆ” ಎಂದು ಅಜ್ಞಾಪಿಸಿದನು.
Kannada BSI Bible 2016
ಕರ್ತನು ಮೋಶೆಗೆ--ನೀನು ಈ ವಾಕ್ಯಗಳನ್ನು ಬರೆ; ಈ ವಾಕ್ಯಗಳ ಪ್ರಕಾರವೇ ನಿನ್ನ ಸಂಗಡಲೂ ಇಸ್ರಾಯೇಲಿನ ಸಂಗಡಲೂ ನಾನು ಒಡಂಬಡಿಕೆಯನ್ನು ಮಾಡಿದ್ದೇನೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಮೋಶೆಗೆ - ನೀನು ಈ ವಾಕ್ಯಗಳನ್ನು ಬರೆ. ಈ ವಾಕ್ಯಗಳ ಮೇರೆಗೆ ನಿನ್ನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ನಿಬಂಧನೆಮಾಡಿದ್ದೇನೆ ಎಂದು ಹೇಳಿದನು.
Kannada Bible (KNCL) BSI 2016
ಸರ್ವೇಶ್ವರ ಮೋಶೆಗೆ, “ನೀನು ಈ ವಾಕ್ಯಗಳನ್ನು ಬರೆ. ಏಕೆಂದರೆ ಈ ವಾಕ್ಯಗಳ ಆಧಾರದ ಮೇಲೆ ನಾನು ನಿನ್ನೊಂದಿಗೂ ಇಸ್ರಯೇಲರೊಂದಿಗೂ ಒಂದು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ,” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಮೋಶೆಗೆ ಹೀಗೆ ಹೇಳಿದರು, “ನೀನು ಈ ವಾಕ್ಯಗಳನ್ನು ಬರೆ. ಏಕೆಂದರೆ ಈ ವಾಕ್ಯಗಳ ಪ್ರಕಾರವೇ ನಾನು ನಿನ್ನ ಮತ್ತು ಇಸ್ರಾಯೇಲಿನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡಿದ್ದೇನೆ.”