Exodus 35:2 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕೆಲಸ ಮಾಡುವುದಕ್ಕೆ ಆರು ದಿನಗಳಿವೆ. ಆದರೆ ಏಳನೆಯ ದಿನವು ನಿಮಗೆ ಬಹು ವಿಶೇಷವಾದ ವಿಶ್ರಾಂತಿ ದಿನವಾಗಿರುವುದು. ಆ ವಿಶೇಷ ದಿನದಲ್ಲಿ ವಿಶ್ರಮಿಸುವುದರ ಮೂಲಕ ನೀವು ಯೆಹೋವನನ್ನು ಸನ್ಮಾನಿಸುವಿರಿ. ಏಳನೆಯ ದಿನದಲ್ಲಿ ಕೆಲಸಮಾಡುವ ವ್ಯಕ್ತಿಯು ಸಂಹರಿಸಲ್ಪಡಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆರು ದಿನಗಳು ನೀವು ಕೆಲಸ ಮಾಡಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾಗಿರುವುದರಿಂದ ಅಂದು ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು; ಆ ದಿನದಲ್ಲಿ ಕೆಲಸಮಾಡುವವನಿಗೆ ಮರಣದಂಡನೆಯಾಗಬೇಕು;
Kannada BSI Bible 2016
ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧದಿನವಾಗಿಯೂ ಕರ್ತನಿಗೆ ವಿಶ್ರಾಂತಿಯ ಸಬ್ಬತ್ತಾಗಿಯೂ ಇರಬೇಕು. ಆ ದಿನದಲ್ಲಿ ಕೆಲಸ ಮಾಡುವವನು ಕೊಲ್ಲಲ್ಪಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆರು ದಿನಗಳು ಕೆಲಸನಡೆಯಬೇಕು; ಏಳನೆಯ ದಿನವು ಪರಿಶುದ್ಧವಾದ ದಿನ; ಅದು ಯೆಹೋವನಿಗೆ ಮೀಸಲಾದ ಸಬ್ಬತ್ ದಿನವಾದ್ದರಿಂದ ಅದರಲ್ಲಿ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಿಬಿಡಬೇಕು;
Kannada Bible (KNCL) BSI 2016
ಆರು ದಿನಗಳು ದುಡಿಯಬೇಕು. ಏಳನೆಯ ದಿನ ಪರಿಶುದ್ಧವಾದ ದಿನ. ಅದು ಸರ್ವೇಶ್ವರನಿಗೆ ಮೀಸಲಾದ ಸಬ್ಬತ್ ದಿನ. ಆದ್ದರಿಂದ ನೀವು ಸಂಪೂರ್ಣವಾಗಿ ದುಡಿಮೆ ನಿಲ್ಲಿಸಬೇಕು. ಆ ದಿನ ದುಡಿಯುವವನಿಗೆ ಮರಣದಂಡನೆಯಾಗಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧವಾಗಿರಬೇಕು. ಅದು ಯೆಹೋವ ದೇವರ ಸಬ್ಬತ್ ದಿನ. ಆ ದಿನದಲ್ಲಿ ಕೆಲಸಮಾಡುವವರಿಗೆ ಮರಣದಂಡನೆಯಾಗಬೇಕು.