Exodus 35:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಕಾಣಿಕೆ ಕೊಡುವುದಕ್ಕೆ ಯಾರ್ಯಾರು ಬಯಸಿದರೋ ಅವರೆಲ್ಲರೂ ಬಂದು ಯೆಹೋವನಿಗೆ ಕಾಣಿಕೆಯನ್ನು ಅರ್ಪಿಸಿದರು. ಈ ಕಾಣಿಕೆಗಳು ದೇವದರ್ಶನಗುಡಾರ, ಅದರ ಎಲ್ಲಾ ವಸ್ತುಗಳು ಮತ್ತು ವಿಶೇಷ ಬಟ್ಟೆಗಳನ್ನು ಮಾಡಲು ಉಪಯೋಗಿಸಲ್ಪಟ್ಟವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾರನ್ನು ಹೃದಯವು ಪ್ರೇರೇಪಿಸಿತೋ, ಯಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಸಮಸ್ತ ಸೇವೆಗಳಿಗಾಗಿಯೂ, ಪವಿತ್ರ ವಸ್ತ್ರಗಳಿಗಾಗಿಯೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.
Kannada BSI Bible 2016
ಅವರಲ್ಲಿ ಪ್ರತಿಯೊಬ್ಬನು ಹೃದಯ ಪ್ರೇರಣೆಯಿಂದ ಮತ್ತು ಪ್ರತಿಯೊಬ್ಬನು ತನ್ನ ಮನಸ್ಸು ಇಷ್ಟಪಡುವಂತೆ ಸಭೆಯ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಕರ್ತನಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರವೂ ಅದರ ಸಮಸ್ತ ಸೇವೆಗೋಸ್ಕರವೂ ದೀಕ್ಷಾವಸ್ತ್ರಗಳಿಗೋಸ್ಕರವೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.
Kannada Bible (KNCL) BSI 2016
ಅವರಲ್ಲಿ ಉದಾರ ಹೃದಯಿಗಳು ಸ್ವಂತ ಇಷ್ಟದಿಂದ ಮುಂದೆ ಬಂದು ದೇವದರ್ಶನದ ಗುಡಾರದ ಕೆಲಸಕ್ಕೂ, ಅದರ ಸಮಸ್ತ ಸೇವೆಗೂ ಹಾಗೂ ದೀಕ್ಷಾವಸ್ತ್ರಗಳಿಗೂ ಬೇಕಾದುವುಗಳನ್ನು ಸರ್ವೇಶ್ವರನಿಗೆ ಕಾಣಿಕೆಯಾಗಿ ತಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೃದಯ ಪ್ರೇರಣೆ ಹೊಂದಿದವರೂ ಸಿದ್ಧಮನಸ್ಸಿನವರೂ ದೇವದರ್ಶನದ ಗುಡಾರದ ಕೆಲಸಕ್ಕಾಗಿಯೂ ಅದರ ಎಲ್ಲಾ ಸೇವೆಗಾಗಿಯೂ ಪರಿಶುದ್ಧ ವಸ್ತ್ರಗಳಿಗಾಗಿಯೂ ಯೆಹೋವ ದೇವರಿಗೆ ಕಾಣಿಕೆಗಳನ್ನು ತೆಗೆದುಕೊಂಡು ಬಂದರು.