Exodus 36:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಮೋಶೆಯು, “ಪವಿತ್ರಸ್ಥಳದ ಕೆಲಸಕ್ಕಾಗಿ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಇನ್ನು ಮುಂದೆ ಯಾವುದನ್ನೂ ಕಾಣಿಕೆಯಾಗಿ ಸಿದ್ಧಮಾಡಬಾರದು” ಎಂಬ ಸಂದೇಶವನ್ನು ಪಾಳೆಯದಲ್ಲೆಲ್ಲಾ ಕಳುಹಿಸಿದನು. ಆದ್ದರಿಂದ ಜನರು ಹೆಚ್ಚಾಗಿ ಕೊಡುವುದನ್ನು ನಿಲ್ಲಿಸಬೇಕಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಮೋಶೆಯು ಇದನ್ನು ಗಮನಿಸಿ, “ದೇವಮಂದಿರದ ಕೆಲಸಕ್ಕಾಗಿ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಇನ್ನು ಮುಂದೆ ಕಾರ್ಯಗಳನ್ನೂ ಮಾಡಬಾರದು” ಎಂದು ಅಪ್ಪಣೆಮಾಡಿ ಅದನ್ನು ಪಾಳೆಯದಲ್ಲಿ ಪ್ರಕಟಿಸಿದನು. ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು.
Kannada BSI Bible 2016
ಆಗ ಮೋಶೆಯು ಇನ್ನು ಮೇಲೆ ಪರಿಶುದ್ಧ ಸ್ಥಳದ ಕಾಣಿಕೆ ಗೋಸ್ಕರ ಯಾವ ಗಂಡಸಾಗಲಿ ಹೆಂಗಸಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸ ಬೇಕೆಂಬದಾಗಿ ಆಜ್ಞಾಪಿಸಬೇಕು ಎಂದು ಹೇಳಿದನು. ಹೀಗೆ ಜನರು ತರುವದನ್ನು ನಿಲ್ಲಿಸಿಬಿಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವಮಂದಿರದ ಕೆಲಸಕ್ಕಾಗಿ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಇನ್ನು ಮುಂದೆ ಯಾವದನ್ನೂ ಸಿದ್ಧಪಡಿಸಬಾರದೆಂದು ಅಪ್ಪಣೆಮಾಡಿ ಪಾಳೆಯದಲ್ಲಿ ಪ್ರಕಟಿಸಿ ಜನರ ಕಾಣಿಕೆಗಳನ್ನು ನಿಲ್ಲಿಸಿಬಿಟ್ಟನು.
Kannada Bible (KNCL) BSI 2016
ಆಗ ಮೋಶೆ, “ದೇವಮಂದಿರದ ನಿರ್ಮಾಣಕ್ಕಾಗಿ ಯಾವ ಸ್ತ್ರೀಪುರುಷನು ಇನ್ನು ಮುಂದೆ ಏನನ್ನೂ ತರಬಾರದೆಂದು ಅಪ್ಪಣೆಮಾಡಿ, ಪಾಳೆಯದಲ್ಲಿ ಪ್ರಕಟಿಸಿ, ಜನರ ಕಾಣಿಕೆಗಳನ್ನು ನಿಲ್ಲಿಸಿಬಿಟ್ಟನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಮೋಶೆಯು, “ಇನ್ನು ಮೇಲೆ ಪರಿಶುದ್ಧಸ್ಥಳದ ಕಾಣಿಕೆಗೋಸ್ಕರ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸಬೇಕು,” ಎಂದು ಆಜ್ಞಾಪಿಸಿದನು. ಹೀಗೆ ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು.