Exodus 38:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕಂಬಗಳ ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ಮಾಡಲಾಗಿತ್ತು. ಕೊಂಡಿಗಳನ್ನು ಮತ್ತು ಪರದೆಯ ಕೋಲುಗಳನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಕಂಬಗಳ ತುದಿಗಳನ್ನೂ ಬೆಳ್ಳಿಯಿಂದ ಹೊದಿಸಲಾಗಿತ್ತು. ಅಂಗಳದಲ್ಲಿದ್ದ ಕಂಬಗಳಿಗೆಲ್ಲಾ ಬೆಳ್ಳಿಯಿಂದ ಮಾಡಿದ ಪರದೆಯ ಕೋಲುಗಳಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಂಬಗಳ ಗದ್ದಿಗೆಕಲ್ಲುಗಳು ತಾಮ್ರದವುಗಳು; ಕಂಬಗಳ ಕೊಂಡಿಗಳೂ, ಕಟ್ಟುಗಳೂ ಬೆಳ್ಳಿಯವು; ಅವುಗಳ ಬೋದಿಗೆಗಳು ಬೆಳ್ಳಿಯ ತಗಡುಗಳಿಂದ ಹೊದಿಸಲ್ಪಟ್ಟವು. ಅಂಗಳದ ಎಲ್ಲಾ ಕಂಬಗಳಿಗೂ ಬೆಳ್ಳಿಯ ಕಟ್ಟುಗಳಿದ್ದವು.
Kannada BSI Bible 2016
ಸ್ತಂಭಗಳ ಕಾಲು ಕುಣಿಕೆಗಳು ಹಿತ್ತಾಳೆಯವುಗಳು; ಆ ಸ್ತಂಭಗಳ ಕೊಂಡಿಯೂ ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾ ಗಿದ್ದವು; ಕಂಬದ ಬೋದಿಗಳು ಬೆಳ್ಳಿಯಿಂದ ಹೊದಿಸ ಲ್ಪಟ್ಟಿದ್ದವು; ಅಂಗಳದ ಎಲ್ಲಾ ಸ್ತಂಭಗಳು ಬೆಳ್ಳಿಯ ಅಲಂಕಾರದ ಪಟ್ಟಿಗಳಿಂದ ಸುತ್ತುವರಿಯಲ್ಪಟ್ಟಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಂಬಗಳ ಗದ್ದಿಗೇಕಲ್ಲುಗಳು ತಾಮ್ರದವುಗಳು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು; ಅವುಗಳ ಬೋದಿಗೆಗಳು ಬೆಳ್ಳಿಯ ತಗಡುಗಳಿಂದ ಹೊದಿಸಲ್ಪಟ್ಟವು. ಅಂಗಳದ ಎಲ್ಲಾ ಕಂಬಗಳಿಗೂ ಬೆಳ್ಳಿಯ ಕಟ್ಟುಗಳಿದ್ದವು.
Kannada Bible (KNCL) BSI 2016
ಕಂಬಗಳ ಗದ್ದಿಗೇಕಲ್ಲುಗಳು ತಾಮ್ರದವುಗಳು; ಕಂಬಗಳ ಕೊಂಡಿಗಳೂ ಕಟ್ಟುಗಳೂ ಬೆಳ್ಳಿಯವು; ಅವುಗಳ ಬೋದಿಗೆಗಳು ಬೆಳ್ಳಿಯ ತಗಡುಗಳಿಂದ ಮಾಡಲ್ಪಟ್ಟವು. ಅಂಗಳದ ಎಲ್ಲಾ ಕಂಬಗಳಿಗೂ ಬೆಳ್ಳಿಯ ಕಟ್ಟುಗಳಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸ್ತಂಭಗಳ ಗದ್ದಿಗೇ ಕಲ್ಲುಗಳು ಕಂಚಿನದ್ದಾಗಿದ್ದವು. ಸ್ತಂಭಗಳ ಕೊಂಡಿಗಳು ಮತ್ತು ಕಟ್ಟುಗಳು ಬೆಳ್ಳಿಯದ್ದಾಗಿದ್ದವು. ಸ್ತಂಭದ ಬೋದಿಗೆಗಳು ಬೆಳ್ಳಿಯಿಂದ ಹೊದಿಸಲಾಗಿತ್ತು. ಅಂಗಳದ ಎಲ್ಲಾ ಸ್ತಂಭಗಳಿಗೆ ಬೆಳ್ಳಿಯ ಕಟ್ಟುಗಳಿದ್ದವು.