Exodus 38:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಂಗಳದ ಬಾಗಿಲಿನ ಪರದೆಯು ಶ್ರೇಷ್ಠ ನಾರುಬಟ್ಟೆಯಿಂದಲೂ, ನೀಲಿ, ನೇರಳೆ, ಕೆಂಪುದಾರಗಳಿಂದಲೂ ಮಾಡಲಾಗಿತ್ತು. ಪರದೆಯಲ್ಲಿ ನಕಾಸಿ ಕೆಲಸ ಮಾಡಲಾಗಿತ್ತು. ಪರದೆಯು ಇಪ್ಪತ್ತು ಮೊಳ ಉದ್ದ ಮತ್ತು ಐದು ಮೊಳ ಅಗಲವಾಗಿತ್ತು. ಅಂಗಳದ ಸುತ್ತಲಿದ್ದ ಎಲ್ಲಾ ಪರದೆಗಳ ಎತ್ತರ ಒಂದೇ ಆಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಂಗಳದ ಬಾಗಿಲಲ್ಲಿದ್ದ ಪರದೆಯು ನಯವಾದ ಹತ್ತಿಯ ಬಟ್ಟೆಯಿಂದಲೂ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದಲೂ ಕಸೂತಿ ಕೆಲಸದವರ ಕೈಯಿಂದ ಮಾಡಿದ ಹಾಗೆಯೇ ಮಾಡಲ್ಪಟ್ಟಿದ್ದವು. ಅದರ ಉದ್ದವು ಇಪ್ಪತ್ತು ಮೊಳವಾಗಿತ್ತು; ಅದರ ಅಗಲವು ಅಂಗಳದ ಮಿಕ್ಕ ಪರದೆಗಳಂತೆ ಐದು ಮೊಳ.
Kannada BSI Bible 2016
ಅಂಗಳ ದ್ವಾರದ ತೆರೆಯು ನಯವಾಗಿ ಹೊಸೆದ ನೂಲಿನ ಬಟ್ಟೆಯಾಗಿತ್ತು; ಅದರ ಮೇಲೆ ನೀಲಿ ಧೂಮ್ರ ರಕ್ತವರ್ಣ ದಾರಗಳಿಂದ ಕಸೂತಿ ಕೆಲಸ ಮಾಡಲಾಗಿತ್ತು; ಅವು ಇಪ್ಪತ್ತು ಮೊಳ ಉದ್ದವಾಗಿದ್ದು ಅಗಲ ಎತ್ತರಗಳಲ್ಲಿ ಅಂಗಳದ ಉಳಿದ ತೆರೆಗಳಿಗೆ ಸರಿಯಾಗುವಂತೆ ಐದು ಮೊಳ ಇತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಂಗಳದ ಬಾಗಲಲ್ಲಿದ್ದ ಪರದೆಯು ಹುರಿನಾರಿನ ಬಟ್ಟೆಯಿಂದಲೂ ನೀಲಿ ಧೂಮ್ರ ರಕ್ತವರ್ಣಗಳುಳ್ಳ ದಾರದಿಂದಲೂ ಬುಟೇದಾರೀ ಕೆಲಸದವರ ಕೈಯಿಂದ ಮಾಡಲ್ಪಟ್ಟಿತು. ಅದರ ಉದ್ದವು ಇಪ್ಪತ್ತು ಮೊಳವಾಗಿತ್ತು; ಅದರ ಅಗಲವು ಅಂಗಳದ ವಿುಕ್ಕ ತೆರೆಗಳಂತೆ ಐದು ಮೊಳ.
Kannada Bible (KNCL) BSI 2016
ಅಂಗಳದ ಬಾಗಲಲ್ಲಿದ್ದ ಪರದೆಯು ಹುರಿನಾರಿನ ಬಟ್ಟೆಯಿಂದಲೂ ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಕಸೂತಿ ಕೆಲಸದವರ ಕೈಯಿಂದ ಮಾಡಲ್ಪಟ್ಟಿತು. ಅದರ ಉದ್ದ ಇಪ್ಪತ್ತು ಮೊಳವಾಗಿತ್ತು; ಅದರ ಅಗಲ ಅಂಗಳದ ಮಿಕ್ಕ ತೆರೆಗಳಂತೆ ಐದು ಮೊಳ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಗುಡಾರದ ಅಂಗಳದ ದ್ವಾರಕ್ಕಾಗಿ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಕಸೂತಿ ಕೆಲಸಮಾಡಿದ ಇಪ್ಪತ್ತು ಮೊಳದ ಪರದೆ ಮಾಡಲಾಗಿತ್ತು. ಅದರ ಉದ್ದವು ಇಪ್ಪತ್ತು ಮೊಳವಾಗಿತ್ತು. ಅಗಲ, ಎತ್ತರಗಳಲ್ಲಿ ಅಂಗಳದ ಉಳಿದ ಪರದೆಗಳಿಗೆ ಸರಿಯಾಗುವಂತೆ ಐದು ಮೊಳ ಇತ್ತು.