Exodus 38:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ಯಜ್ಞವೇದಿಕೆಯ ನಾಲ್ಕು ಮೂಲೆಗಳಲ್ಲಿ ಒಂದೊಂದು ಕೊಂಬುಗಳನ್ನು ಇಟ್ಟು ಪ್ರತಿಯೊಂದೂ ಕೊಂಬನ್ನು ಅದರ ಮೂಲೆಗೆ ಸೇರಿಸಿದನು. ಹೀಗಾಗಿ ಪ್ರತಿಯೊಂದೂ ಅಖಂಡವಾದ ಒಂದೇ ವಸ್ತುವಿನಂತಾಯಿತು. ಅವನು ಯಜ್ಞವೇದಿಕೆಯನ್ನು ತಾಮ್ರದಿಂದ ಹೊದಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿದನು; ಅವು ಯಜ್ಞವೇದಿಯಿಂದಲೇ ಮಾಡಲ್ಪಟ್ಟಿದ್ದವು. ಆ ವೇದಿಗೆ ತಾಮ್ರದ ತಗಡುಗಳನ್ನು ಹೊದಿಸಿದನು.
Kannada BSI Bible 2016
ಇದಲ್ಲದೆ ಅವನು ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಿದನು; ಅದರ ಕೊಂಬುಗಳು ಜಾಲೀ ಮರದ್ದೇ ಆಗಿದ್ದವು; ಅವನು ಅವುಗಳನ್ನು ಹಿತ್ತಾಳೆಯಿಂದ ಹೊದಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳನ್ನು ಮಾಡಿದನು; ಅವು ಯಜ್ಞವೇದಿಗೆ ಏಕವಾಗಿದ್ದವು. ಆ ವೇದಿಗೆ ತಾಮ್ರದ ತಗಡುಗಳನ್ನು ಹೊದಿಸಿದನು.
Kannada Bible (KNCL) BSI 2016
ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬೆಗಳನ್ನು ಮಾಡಿದನು; ಅವು ಬಲಿಪೀಠದ ಅಂಗಾಂಗಗಳಾಗಿದ್ದವು. ಆ ಪೀಠಕ್ಕೆ ತಾಮ್ರದ ತಗಡುಗಳನ್ನು ಹೊದಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಿದರು. ಆ ಕೊಂಬುಗಳು ಆ ಬಲಿಪೀಠಕ್ಕೆ ಏಕವಾಗಿರಬೇಕು. ಅವುಗಳನ್ನು ಕಂಚಿನಿಂದ ಹೊದಿಸಿದರು.