Exodus 38:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಳಿಕ ಅವನು ತಾಮ್ರದ ಬಳೆಗಳನ್ನು ಮಾಡಿದನು. ಈ ಬಳೆಗಳು ವೇದಿಕೆಯನ್ನು ಕೋಲುಗಳಿಂದ ಹೊರುವುದಕ್ಕೆ ಉಪಯುಕ್ತವಾಗಿದ್ದವು. ಅವನು ಬಳೆಗಳನ್ನು ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ಇಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಜ್ಞವೇದಿಯನ್ನು ಎತ್ತಿ ಹಿಡಿಯುವ ಕಂಬಗಳನ್ನು ಸೇರಿಸುವುದಕ್ಕಾಗಿ ತಾಮ್ರದ ಜಾಲರಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಎರಕಹೊಯಿಸಿದನು.
Kannada BSI Bible 2016
ಆ ಹಿತ್ತಾಳೆ ಯ ಬೆಂಕಿಯ ಗೂಡನ್ನು ಹೊರುವಾಗ ಕೋಲು ಸಿಕ್ಕಿಸುವದಕ್ಕೋಸ್ಕರ ಅದರ ನಾಲ್ಕು ತುದಿಗಳಲ್ಲಿ ನಾಲ್ಕು ಉಂಗುರಗಳನ್ನು ಎರಕಹೊಯ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ವೇದಿಯನ್ನು ಎತ್ತುವ ಕೋಲುಗಳನ್ನು ಸೇರಿಸುವದಕ್ಕಾಗಿ ಆ ತಾಮ್ರದ ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಎರಕಹೊಯಿದನು.
Kannada Bible (KNCL) BSI 2016
ಪೀಠವನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ತಾಮ್ರದ ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಎರಕಹೊಯಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ವೇದಿಯನ್ನು ಹೊರುವಾಗ ಕೋಲು ಸಿಕ್ಕಿಸುವುದಕ್ಕೋಸ್ಕರ ಅದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಬಳೆಗಳನ್ನು ಕಂಚಿನಿಂದ ಎರಕ ಹೊಯ್ದರು.