Exodus 38:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವನು ವೇದಿಕೆಯ ಪಾರ್ಶ್ವಗಳಲ್ಲಿದ್ದ ಬಳೆಗಳಲ್ಲಿ ಕೋಲುಗಳನ್ನು ಸೇರಿಸಿದನು. ಕೋಲುಗಳು ವೇದಿಕೆಯನ್ನು ಹೊರುವುದಕ್ಕಾಗಿ ಉಪಯುಕ್ತವಾಗಿದ್ದವು. ಅವನು ವೇದಿಕೆಯನ್ನು ಪೆಟ್ಟಿಗೆಯಂತೆ ಮಾಡಲು ಹಲಗೆಗಳನ್ನು ಉಪಯೋಗಿಸಿದನು. ಅದು ಟೊಳ್ಳಾಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎರಡು ಬದಿಗಳಲ್ಲಿರುವ ಬಳೆಗಳಲ್ಲಿ ಅವುಗಳನ್ನು ಸೇರಿಸಿದನು. ಆ ಯಜ್ಞವೇದಿಯನ್ನು ಹಲಗೆಗಳಿಂದ ಬರಿದಾಗಿರುವ ಒಂದು ಪೆಟ್ಟಿಗೆಯಂತೆ ಮಾಡಿಸಿದನು.
Kannada BSI Bible 2016
ಬಲಿಪೀಠವನ್ನು ಹೊರುವದಕ್ಕೆ ಅದರ ಬದಿಯಲ್ಲಿ ಮಾಡಿದ ಉಂಗುರ ಗಳಲ್ಲಿ ಆ ಕೋಲುಗಳನ್ನು ಸಿಕ್ಕಿಸಿದನು; ಅವನು ಆ ಬಲಿಪೀಠವನ್ನು ಹಲಗೆಗಳಿಂದ ಪೊಳ್ಳಾಗಿ ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರ ಎರಡು ಪಕ್ಕಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು. ಆ ವೇದಿಯನ್ನು ಹಲಿಗೆಗಳಿಂದ ಪೆಟ್ಟಿಗೆಯಂತೆ ಮಾಡಿದನು.
Kannada Bible (KNCL) BSI 2016
ಅದರ ಎರಡು ಪಕ್ಕಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು. ಆ ಪೀಠವನ್ನು ಹಲಗೆಗಳಿಂದ ಪೆಟ್ಟಿಗೆಯಂತೆ ಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಲಿಪೀಠವನ್ನು ಹೊರುವುದಕ್ಕೆ ಅದರ ಎರಡೂ ಬದಿಯಲ್ಲಿ ಮಾಡಿದ ಕೋಲುಗಳನ್ನು ಬಳೆಗಳಲ್ಲಿ ಸೇರಿಸಿದರು. ಅವರು ಆ ಬಲಿಪೀಠವನ್ನು ಚೌಕಟ್ಟುಗಳಿಂದ ಪೊಳ್ಳಾಗಿರುವಂತೆ ಮಾಡಿದರು.