Exodus 39:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ರತ್ನದಂತೆ ದೈವನಿರ್ಣಯ ಪದಕದಲ್ಲಿ ಹನ್ನೆರಡು ರತ್ನಗಳಿದ್ದವು. ಪ್ರತಿ ರತ್ನದಲ್ಲಿಯೂ ಇಸ್ರೇಲನ ಗಂಡುಮಕ್ಕಳಲ್ಲಿ ಒಬ್ಬೊಬ್ಬನ ಹೆಸರು ಬರೆಯಲ್ಪಟ್ಟಿತ್ತು. ಮುದ್ರಾರತ್ನವನ್ನು ಕೆತ್ತುವಂತೆ ಕಲ್ಲಿನಲ್ಲಿ ಹೆಸರುಗಳನ್ನು ಕೆತ್ತಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು; ಮುದ್ರಾಕ್ಷಗಳಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರು ಕೆತ್ತಲ್ಪಟ್ಟಿತ್ತು.
Kannada BSI Bible 2016
ಆ ಕಲ್ಲುಗಳು ಇಸ್ರಾಯೇಲ್ಯರ ಮಕ್ಕಳ ಹೆಸರುಗಳ ಪ್ರಕಾರ ಹನ್ನೆರಡಾಗಿ ಅವರ ಹೆಸರುಗಳಿಗನುಸಾರವಾಗಿ ಇದ್ದವು. ಒಂದೊಂದಕ್ಕೆ ಒಂದೊಂದು ಹೆಸರಾಗಿ ಹನ್ನೆರಡು ಕಲ್ಲುಗಳಿಗೋಸ್ಕರ ಮುದ್ರೆಗಳ ಹಾಗೆ ಕೆತ್ತಿದವುಗಳಾ ಗಿದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು; ಮುದ್ರಾರತ್ನದಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರು ಕೆತ್ತಲ್ಪಟ್ಟಿತು.
Kannada Bible (KNCL) BSI 2016
ಇಸ್ರಯೇಲರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು. ಮುದ್ರಾರತ್ನದಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಲಾಗಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ರತ್ನಗಳು ಇಸ್ರಾಯೇಲರ ಗೋತ್ರದ ಹೆಸರುಗಳ ಪ್ರಕಾರ ಅವು ಹನ್ನೆರಡಾಗಿದ್ದವು. ಒಂದೊಂದರ ಮೇಲೆ ಒಂದೊಂದು ಹೆಸರಿದ್ದು ಹನ್ನೆರಡು ಗೋತ್ರಗಳ ಪ್ರಕಾರ ಮುದ್ರೆಗಳ ಹಾಗೆ ಕೆತ್ತಿದವುಗಳಾಗಿದ್ದವು.