Exodus 39:40 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ಅಂಗಳದ ಸುತ್ತಲಿರುವ ಪರದೆಗಳ ಗೋಡೆಯನ್ನೂ ಅದರ ಕಂಬಗಳನ್ನೂ ಗದ್ದಿಗೇಕಲ್ಲುಗಳನ್ನೂ ಅಂಗಳದ ಪ್ರವೇಶವನ್ನು ಮುಚ್ಚುವ ಪರದೆಯನ್ನೂ ಹಗ್ಗಗಳನ್ನೂ ಗುಡಾರದ ಗೂಟಗಳನ್ನೂ ದೇವದರ್ಶನದ ಪವಿತ್ರಗುಡಾರದ ಎಲ್ಲಾ ವಸ್ತುಗಳನ್ನೂ ಮೋಶೆಗೆ ತೋರಿಸಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತೊಟ್ಟಿಯನ್ನು, ಅದರ ಪೀಠವನ್ನು, ಅಂಗಳದ ತೆರೆಗಳನ್ನು, ಕಂಬಗಳನ್ನು, ಮೆಟ್ಟುವಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಯನ್ನು, ಅದರ ಹಗ್ಗಗಳನ್ನು, ಗೂಟಗಳನ್ನು, ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನು,
Kannada BSI Bible 2016
ಅಂಗಳದ ತೆರೆಗಳನ್ನು, ಸ್ತಂಭಗಳನ್ನು, ಕುಣಿಕೆಗಳನ್ನು, ಅಂಗಳದ ಬಾಗಿಲಿನ ತೆರೆಯನ್ನು, ಹಗ್ಗಗಳನ್ನು, ಗೂಟಗಳನ್ನು, ಸಭೆಯ ಗುಡಾರಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು;
Kannada BSI JV (ಕನ್ನಡ ಸತ್ಯವೇದವು J.V. (BSI))
ಅಂಗಳದ ತೆರೆಗಳು, ಕಂಬಗಳು, ಗದ್ದಿಗೇಕಲ್ಲುಗಳು ಇವುಗಳನ್ನೂ; ಅಂಗಳದ ಬಾಗಲಿನ ಪರದೆಯು, ಅದರ ಹಗ್ಗಗಳು, ಗೂಟಗಳು ಇವುಗಳನ್ನೂ; ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನೂ;
Kannada Bible (KNCL) BSI 2016
ಅಂಗಳದ ತೆರೆಗಳು, ಕಂಬಗಳು, ಗದ್ದಿಗೇಕಲ್ಲುಗಳು ಇವುಗಳನ್ನೂ; ಅಂಗಳದ ಬಾಗಿಲಿನ ಪರದೆ, ಅದರ ಹಗ್ಗಗಳು, ಗೂಟಗಳು ಇವುಗಳನ್ನೂ; ದೇವದರ್ಶನದ ಗುಡಾರದ ಸೇವೆಗೆ ಬೇಕಾದ ಎಲ್ಲಾ ಉಪಕರಣಗಳನ್ನೂ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವದರ್ಶನದ ಗುಡಾರ ಅಂಗಳದ ಪರದೆಗಳನ್ನು, ಅದರ ಸ್ತಂಭಗಳನ್ನು, ಅದರ ಗದ್ದಿಗೇ ಕಲ್ಲುಗಳನ್ನು, ಅಂಗಳದ ಬಾಗಿಲಿನ ಪರದೆಗಳನ್ನು, ಅದರ ಹಗ್ಗಗಳನ್ನು, ಗುಡಾರದ ಗೂಟಗಳನ್ನು, ಸಭೆಯ ದೇವದರ್ಶನದ ಗುಡಾರಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು,