Exodus 39:41 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ತರುವಾಯ ಮೋಶೆಗೆ ಪವಿತ್ರಸ್ಥಳದಲ್ಲಿ ಸೇವೆ ಮಾಡುವುದಕ್ಕೆ ಯಾಜಕರಿಗಾಗಿ ಮಾಡಿದ ಬಟ್ಟೆಗಳನ್ನು ಅಂದರೆ ಯಾಜಕನಾದ ಆರೋನನಿಗೆ ಮತ್ತು ಅವನ ಮಕ್ಕಳಿಗಾಗಿ ಮಾಡಿದ ವಿಶೇಷ ಬಟ್ಟೆಗಳನ್ನು ಅವರು ತೋರಿಸಿದರು. ಅವರು ಯಾಜಕರಾಗಿ ಸೇವೆ ಮಾಡುವಾಗ ಧರಿಸಿಕೊಳ್ಳತಕ್ಕ ಬಟ್ಟೆಗಳು ಇವುಗಳೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವಮಂದಿರದೊಳಗೆ ನಡೆಯುವ ದೇವರಕಾರ್ಯಗಳಿಗೆ ಅಲಂಕಾರ ವಸ್ತ್ರ ಅಂದರೆ ಆರೋನನಿಗೆ ಬೇಕಾದ ಪವಿತ್ರ ವಸ್ತ್ರಗಳನ್ನು ಯಾಜಕಸೇವೆ ಮಾಡುವವರಾದ ಅವನ ಮಕ್ಕಳಿಗೆ ಬೇಕಾದ ವಸ್ತ್ರಗಳನ್ನು ತಂದರು.
Kannada BSI Bible 2016
ಪರಿಶುದ್ಧ ಸ್ಥಳದ ಸೇವೆಗೋಸ್ಕರ ಸೇವಾ ವಸ್ತ್ರಗಳನ್ನು, ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನು, ಅವನ ಕುಮಾರರಿಗೆ ಯಾಜಕ ಸೇವೆಗೋಸ್ಕರ ಬೇಕಾದ ವಸ್ತ್ರಗಳನ್ನು ತಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವಮಂದಿರದೊಳಗೆ ನಡೆಯುವ ಸೇವೆಗೋಸ್ಕರ ಬೇಕಾದ ಅಲಂಕಾರವಸ್ತ್ರ ಅಂದರೆ ಆರೋನನಿಗೆ ಬೇಕಾದ ದೀಕ್ಷಾವಸ್ತ್ರ ಯಾಜಕಸೇವೆ ಮಾಡುವವರಾದ ಅವನ ಮಕ್ಕಳಿಗೆ ಬೇಕಾದ ವಸ್ತ್ರ ಇವುಗಳನ್ನೂ ತಂದರು.
Kannada Bible (KNCL) BSI 2016
ದೇವಮಂದಿರದೊಳಗೆ ನಡೆಯುವ ಸೇವೆಗೋಸ್ಕರ ಬೇಕಾದ ಅಲಂಕಾರವಸ್ತ್ರ, ಅಂದರೆ ಆರೋನನಿಗೆ ಬೇಕಾದ ದೀಕ್ಷಾವಸ್ತ್ರ ಯಾಜಕಸೇವೆ ಮಾಡುವವರಾದ ಅವನ ಮಕ್ಕಳಿಗೆ ಬೇಕಾದ ವಸ್ತ್ರ ಇವುಗಳನ್ನೂ ತಂದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪರಿಶುದ್ಧಸ್ಥಳದ ಸೇವೆಗೋಸ್ಕರ ನೇಯ್ದ ಪರಿಶುದ್ಧ ವಸ್ತ್ರಗಳನ್ನು ಅಂದರೆ ಸೇವೆಮಾಡುವದಕ್ಕೆ ಯಾಜಕನಾದ ಆರೋನನಿಗೆ ಮತ್ತು ಅವನ ಪುತ್ರರಿಗೆ ಯಾಜಕವಸ್ತ್ರಗಳನ್ನು ತಂದರು.