Exodus 4:3 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಯೆಹೋವನು, “ನಿನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡು” ಅಂದನು. ಮೋಶೆ, ತನ್ನ ಊರುಗೋಲನ್ನು ನೆಲದ ಮೇಲೆ ಬಿಸಾಡಿದನು. ಆಗ ಕೋಲು ಹಾವಾಯಿತು. ಮೋಶೆ ಅದರ ಬಳಿಯಿಂದ ಓಡಿಹೋದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಅವನಿಗೆ, “ಅದನ್ನು ನೆಲದ ಮೇಲೆ ಹಾಕು” ಎಂದನು. ಅವನು ನೆಲದಲ್ಲಿ ಹಾಕುತ್ತಲೇ ಅದು ಹಾವಾಯಿತು! ಮೋಶೆ ಅದಕ್ಕೆ ಭಯಪಟ್ಟು ಓಡಿಹೋದನು.
Kannada BSI Bible 2016
ಕರ್ತನು ಅವನಿಗೆ--ಅದನ್ನು ನೆಲದ ಮೇಲೆ ಬಿಸಾಡು ಅಂದಾಗ ಅವನು ಅದನ್ನು ಬಿಸಾಡಿದನು; ಆಗ ಅದು ಸರ್ಪ ವಾಯಿತು. ಮೋಶೆಯು ಅಲ್ಲಿಂದ ಓಡಿಹೋದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಅವನಿಗೆ - ಅದನ್ನು ನೆಲದಲ್ಲಿ ಬೀಸಾಡು ಎಂದು ಹೇಳಿದನು. ನೆಲದಲ್ಲಿ ಬೀಸಾಡುತ್ತಲೇ ಅದು ಹಾವಾಯಿತು; ಮೋಶೆ ಅದಕ್ಕೆ ಭಯಪಟ್ಟು ಓಡಿಹೋದನು.
Kannada Bible (KNCL) BSI 2016
ಸರ್ವೇಶ್ವರ ಅವನಿಗೆ, “ಅದನ್ನು ನೆಲದಲ್ಲಿ ಬಿಸಾಡು,” ಎಂದರು. ನೆಲದಲ್ಲಿ ಬಿಸಾಡುತ್ತಲೇ ಅದು ಹಾವಾಯಿತು! ಅದನ್ನು ಕಂಡ ಮೋಶೆ ಭಯಪಟ್ಟು ಓಡಿಹೋದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಅವನಿಗೆ, “ಅದನ್ನು ನೆಲದ ಮೇಲೆ ಬಿಸಾಡು,” ಎಂದರು. ಅವನು ಅದನ್ನು ನೆಲದ ಮೇಲೆ ಬಿಸಾಡಿದನು. ಆಗ ಅದು ಸರ್ಪವಾಯಿತು. ಮೋಶೆ ಅಲ್ಲಿಂದ ಓಡಿಹೋದನು.