Exodus 40:35 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮೋಡವು ದೇವದರ್ಶನಗುಡಾರದ ಮೇಲೆ ನಿಂತಿತು. ಯೆಹೋವನ ಮಹಿಮೆಯು ಪವಿತ್ರಗುಡಾರವನ್ನು ತುಂಬಿಕೊಂಡಿದ್ದರಿಂದ ಮೋಶೆಯು ಒಳಗೆ ಪ್ರವೇಶಿಸಲಾಗಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಗೊಂಡಿದ್ದು ಯೆಹೋವನ ತೇಜಸ್ಸು ಪರಿಶುದ್ಧ ನಿವಾಸದ ತುಂಬಾ ಅವರಿಸಿ ಯೆಹೋವನ ಮಹಿಮೆಯು ಗುಡಾರದೊಳಗೆ ತುಂಬಿಕೊಂಡ್ದಿದರಿಂದಲೂ ಮೋಶೆಯು ಗುಡಾರದ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
Kannada BSI Bible 2016
ಸಭೆ ಡೇರೆಯ ಮೇಲೆ ಮೇಘವು ನೆಲೆಯಾಗಿದದ್ದರಿಂದಲೂ ಕರ್ತನ ಮಹಿಮೆಯು ಗುಡಾರವನ್ನು ತುಂಬಿದ್ದರಿಂದಲೂ ಮೋಶೆಯು ಒಳಗೆ ಪ್ರವೇಶಿಸಲಾರದೆ ಇದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿರುವದರಿಂದಲೂ ಯೆಹೋವನ ತೇಜಸ್ಸು ಗುಡಾರದೊಳಗೆ ತುಂಬಿರುವದರಿಂದಲೂ ಮೋಶೆ ಗುಡಾರದಲ್ಲಿ ಹೋಗಲಾರದೆ ಇದ್ದನು.
Kannada Bible (KNCL) BSI 2016
ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಯಾಗಿರುವುದರಿಂದಲೂ ಸರ್ವೇಶ್ವರನ ತೇಜಸ್ಸು ಗುಡಾರದೊಳಗೆ ತುಂಬಿದ್ದುದರಿಂದಲೂ ಮೋಶೆ ಗುಡಾರದಲ್ಲಿ ಹೋಗಲಾರದೆ ಇದ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವದರ್ಶನದ ಗುಡಾರದ ಮೇಲೆ ಮೇಘವು ನೆಲೆಯಾಗಿದ್ದದರಿಂದಲೂ, ಯೆಹೋವ ದೇವರು ಮಹಿಮೆಯು ದೇವದರ್ಶನದ ಗುಡಾರವನ್ನು ತುಂಬಿದ್ದರಿಂದಲೂ, ಮೋಶೆಯು ಒಳಗೆ ಪ್ರವೇಶಿಸಲಾರದೆ ಇದ್ದನು.