Exodus 40:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಗುಡಾರದೊಳಗೆ ಧೂಪವನ್ನು ಅರ್ಪಿಸಲು ಬಂಗಾರದ ವೇದಿಕೆಯನ್ನು ಇಡು. ವೇದಿಕೆಯನ್ನು ಒಡಂಬಡಿಕೆಯ ಪೆಟ್ಟಿಗೆಯ ಮುಂದಿರಿಸು. ಬಳಿಕ ಪವಿತ್ರಗುಡಾರದ ಪ್ರವೇಶದಲ್ಲಿ ಪರದೆಯನ್ನು ಇರಿಸು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಜ್ಞಾಶಾಸನಗಳ ಮಂಜೂಷದ ಎದುರಾಗಿ ಚಿನ್ನದ ಧೂಪವೇದಿಯನ್ನು ಇಟ್ಟು ಗುಡಾರದ ಬಾಗಿಲಿನ ಪರದೆಯನ್ನು ಕಟ್ಟಬೇಕು.
Kannada BSI Bible 2016
ನೀನು ಧೂಪಕ್ಕೋಸ್ಕರ ಮಾಡಿದ ಚಿನ್ನದ ಬಲಿಪೀಠವನ್ನು ಮಂಜೂಷದ ಸಾಕ್ಷಿಯ ಪೆಟ್ಟಿಗೆಗೆ ಎದುರಾಗಿ ಇಟ್ಟು, ಗುಡಾರದ ಬಾಗಿಲಿಗೆ ತೆರೆಯನ್ನು ಹಾಕಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಜ್ಞಾಶಾಸನಗಳ ಮಂಜೂಷದ ಎದುರಾಗಿ ಚಿನ್ನದ ಧೂಪವೇದಿಯನ್ನು ಇಟ್ಟು ಗುಡಾರದ ಬಾಗಲಲ್ಲಿ ಪರದೆಯನ್ನು ಕಟ್ಟಬೇಕು.
Kannada Bible (KNCL) BSI 2016
ಆಜ್ಞಾಶಾಸನಗಳ ಮಂಜೂಷದ ಎದುರಾಗಿ ಚಿನ್ನದ ಧೂಪವೇದಿಕೆಯನ್ನು ಇಟ್ಟು, ಗುಡಾರದ ಬಾಗಿಲಲ್ಲಿ ಪರದೆಯನ್ನು ಕಟ್ಟು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಮಾಡಿದ ಚಿನ್ನದ ಧೂಪಪೀಠವನ್ನು ಒಡಂಬಡಿಕೆಯ ಮಂಜೂಷದ ಎದುರಾಗಿ ಇಟ್ಟು, ದೇವದರ್ಶನದ ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಬೇಕು.