Exodus 6:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನಾನು ಯೆಹೋವನೇ. ನಾನು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಕಾಣಿಸಿಕೊಂಡೆನು. ಅವರು ನನ್ನನ್ನು ‘ಎಲ್ ಶದ್ದಾಯ್’ (ಸರ್ವಶಕ್ತನಾದ ದೇವರು) ಎಂದು ಕರೆದರು. ಆದರೆ ನಾನು ನನ್ನನ್ನು ಯೆಹೋವ ಎಂಬ ನನ್ನ ಹೆಸರಿನಲ್ಲಿ ಅವರಿಗೆ ಗೊತ್ತುಪಡಿಸಿಕೊಳ್ಳಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ ಸರ್ವಶಕ್ತನಾದ ದೇವರಾಗಿ ಕಾಣಿಸಿಕೊಂಡಿದ್ದೆನು. ಆದರೆ ಯೆಹೋವನೆಂಬ ನನ್ನ ಹೆಸರಿನಲ್ಲಿ ಅವರಿಗೆ ಗೋಚರವಾಗಿರಲಿಲ್ಲ.
Kannada BSI Bible 2016
ನಾನೇ ಅಬ್ರಹಾಮನಿಗೂ ಇಸಾಕ ನಿಗೂ ಯಾಕೋಬನಿಗೂ ಸರ್ವಶಕ್ತನಾದ ದೇವರೆಂಬ ನಾಮದಲ್ಲಿ ಕಾಣಿಸಿಕೊಂಡೆನು. ಆದರೆ ಯೆಹೋವ ನೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಗೋಚರ ವಾಗಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಯೆಹೋವನು; ಅಬ್ರಹಾಮ ಇಸಾಕ ಯಾಕೋಬರಿಗೆ ನಾನು ಸರ್ವಶಕ್ತನಾದ ದೇವರೆಂಬ ಹೆಸರುಳ್ಳವನಾಗಿ ಕಾಣಿಸಿಕೊಂಡೆನೇ ಹೊರತು ಯೆಹೋವನು ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ.
Kannada Bible (KNCL) BSI 2016
“ನಾನು ಸರ್ವೇಶ್ವರ, ಅಬ್ರಹಾಮ, ಇಸಾಕ ಹಾಗು ಯಕೋಬರಿಗೆ ನಾನು ‘ಸರ್ವಶಕ್ತನಾದ ದೇವರು ಎಂಬ ಹೆಸರುಳ್ಳವನಾಗಿ ಕಾಣಿಸಿಕೊಂಡನೇ ಹೊರತು ‘ಸರ್ವೇಶ್ವರ’ ಎಂಬ ನನ್ನ ಹೆಸರಿನಿಂದ ಅವರಿಗೆ ಗೋಚರವಾಗಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನೇ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಸರ್ವಶಕ್ತ ದೇವರೆಂದು ಪ್ರಕಟಿಸಿಗೊಂಡೆನು. ಆದರೆ ಯೆಹೋವ ದೇವರೆಂಬ ನನ್ನ ಹೆಸರಿನಿಂದ ನಾನು ಅವರಿಗೆ ಪೂರ್ಣವಾಗಿ ತಿಳಿಸಲಿಲ್ಲ.