Exodus 7:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಮುಂಜಾನೆ ಅವನು ನದಿಗೆ ಹೋಗುವನು. ಸರ್ಪವಾಗಿ ಮಾರ್ಪಾಟಾದ ಊರುಗೋಲನ್ನು ತೆಗೆದುಕೊಂಡು ನದಿಯ ತೀರಕ್ಕೆ ಹೋಗಿ ಅವನನ್ನು ಭೇಟಿಯಾಗಿ ಅವನಿಗೆ,
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಬೆಳಿಗ್ಗೆ ಫರೋಹನ ಬಳಿಗೆ ಹೋಗು, ಅವನು ನೀರಿನ ಬಳಿಗೆ ಇಳಿದು ಬರುತ್ತಾನಲ್ಲಾ. ಸರ್ಪವಾಗಿ ಮಾರ್ಪಾಟುಮಾಡಿದ ಆ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಅವನನ್ನು ಎದುರುಗೊಳ್ಳುವುದಕ್ಕೆ ನೈಲ್ ನದಿ ತೀರದಲ್ಲಿ ನಿಂತುಕೊಂಡು ಅವನಿಗೆ ಹೀಗನ್ನಬೇಕು,
Kannada BSI Bible 2016
ಬೆಳಿಗ್ಗೆ ಫರೋಹನ ಬಳಿಗೆ ಹೋಗು; ಇಗೋ, ಅವನು ಹೊರಗೆ ನೀರಿನ ಬಳಿಗೆ ಹೋಗುವನು. ನದೀತೀರದಲ್ಲಿ ಅವನೆದುರಿಗೆ ನಿಂತುಕೊಂಡು ಸರ್ಪವಾಗಿ ಮಾಡಲ್ಪಟ್ಟ ಕೋಲನ್ನು ನಿನ್ನ ಕೈಯಲ್ಲಿ ಹಿಡುಕೊಂಡು
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆಳಿಗ್ಗೆ ಫರೋಹನ ಬಳಿಗೆ ಹೋಗು; ಅವನು ನದಿಗೆ ಹೋಗುತ್ತಾನಲ್ಲಾ. ಸರ್ಪವಾಗಿ ಮಾಡಲ್ಪಟ್ಟ ಆ ಕೋಲನ್ನು ನೀನು ಕೈಯಲ್ಲಿ ಹಿಡಿದುಕೊಂಡು ಅವನನ್ನು ಎದುರುಗೊಳ್ಳುವದಕ್ಕೆ ನೈಲ್ ನದೀತೀರದಲ್ಲಿ ನಿಂತುಕೊಂಡು ಹೀಗನ್ನಬೇಕು -
Kannada Bible (KNCL) BSI 2016
ಬೆಳಿಗ್ಗೆ ನೀನು ಫರೋಹನ ಬಳಿಗೆ ಹೋಗು. ಆಗ ಅವನು ನದಿಗೆ ಹೋಗುತ್ತಿರುತ್ತಾನೆ. ಅವನನ್ನು ಭೇಟಿಯಾಗಲು ನೈಲ್ ನದಿ ತೀರದಲ್ಲೆ ನಿಂತುಕೊಂಡಿರು. ಸರ್ಪವಾಗಿ ಮಾರ್ಪಟ್ಟ ಆ ಕೋಲು ನಿನ್ನ ಕೈಯಲ್ಲಿರಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೆಳಿಗ್ಗೆ ಫರೋಹನ ಬಳಿಗೆ ಹೋಗು. ಅವನು ಹೊರಗೆ ನದಿಯ ಬಳಿಗೆ ಹೋಗುವನು. ಆಗ ನೈಲ್ ನದಿ ತೀರದಲ್ಲಿ ಅವನೆದುರಿಗೆ ನಿಂತುಕೊಂಡು, ಸರ್ಪವಾಗಿ ಮಾಡಿದ ಕೋಲನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡಿರು.