Exodus 7:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನದಿಯಲ್ಲಿದ್ದ ಮೀನುಗಳು ಸತ್ತವು; ನದಿಯು ಹೊಲಸಾಗತೊಡಗಿತು. ಆದ್ದರಿಂದ ಈಜಿಪ್ಟಿನವರು ನದಿಯ ನೀರನ್ನು ಕುಡಿಯಲಾಗಲಿಲ್ಲ. ಈಜಿಪ್ಟಿನ ನೀರೆಲ್ಲಾ ರಕ್ತವೇ ಆಗಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರಲ್ಲಿದ್ದ ಮೀನುಗಳು ಸತ್ತುಹೋದವು. ನದಿಯು ದುರ್ವಾಸನೆಗೊಂಡಿದ್ದರಿಂದ ಐಗುಪ್ತರು ನೈಲ್ ನದಿಯ ನೀರನ್ನು ಕುಡಿಯಲಾರದೆ ಹೋದರು. ಐಗುಪ್ತ ದೇಶದಲ್ಲೆಲ್ಲಾ ರಕ್ತವೇ ಕಾಣುತಿತ್ತು.
Kannada BSI Bible 2016
ನದಿಯಲ್ಲಿದ್ದ ವಿಾನುಗಳು ಸತ್ತವು; ನದಿಯು ದುರ್ವಾಸನೆಗೊಂಡಿತು. ಐಗುಪ್ತ್ಯರು ನದಿಯ ನೀರನ್ನು ಕುಡಿಯಲಾರದೆ ಹೋದರು. ಆಗ ಐಗುಪ್ತದೇಶದಲ್ಲೆಲ್ಲಾ ರಕ್ತವೇ ಆಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರಲ್ಲಿದ್ದ ಮೀನುಗಳು ಸತ್ತುಹೋದವು; ನದಿಯು ಹೊಲಸು ನಾರಿದ್ದರಿಂದ ಐಗುಪ್ತ್ಯರು ಅದರಲ್ಲಿ ಕುಡಿಯಲಾರದೆ ಹೋದರು. ಐಗುಪ್ತ ದೇಶದಲ್ಲೆಲ್ಲಾ ರಕ್ತವೇ ಆಗಿತ್ತು.
Kannada Bible (KNCL) BSI 2016
ಅದರಲ್ಲಿದ್ದ ಮೀನುಗಳು ಸತ್ತುಹೋದವು. ನದಿ ಹೊಲಸಾಗಿ ನಾರುತ್ತಿತ್ತು. ಈಜಿಪ್ಟಿನವರು ಅದರ ನೀರನ್ನು ಕುಡಿಯಲಾರದೆ ಹೋದರು. ಈಜಿಪ್ಟ್ ದೇಶವೆಲ್ಲಾ ರಕ್ತಮಯ ಆಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನದಿಯಲ್ಲಿದ್ದ ಮೀನುಗಳು ಸತ್ತವು, ನದಿಯು ದುರ್ವಾಸನೆಗೊಂಡಿತು. ಈಜಿಪ್ಟಿನವರು ನೈಲ್ ನದಿಯ ನೀರನ್ನು ಕುಡಿಯಲಾರದೆ ಹೋದರು. ಆಗ ಈಜಿಪ್ಟ್ ದೇಶದಲ್ಲೆಲ್ಲಾ ರಕ್ತವಿತ್ತು.