Exodus 8:24 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೆಹೋವನು ತಾನು ಹೇಳಿದಂತೆಯೇ ಮಾಡಿದನು. ಲೆಕ್ಕವಿಲ್ಲದಷ್ಟು ಹುಳಗಳು ಈಜಿಪ್ಟಿಗೆ ಬಂದು ಫರೋಹನ ಮನೆಯಲ್ಲಿಯೂ ಅವನ ಅಧಿಕಾರಿಗಳ ಮನೆಗಳಲ್ಲಿಯೂ ತುಂಬಿಕೊಂಡವು. ಇಡೀ ಈಜಿಪ್ಟನ್ನೇ ಅವು ತುಂಬಿಕೊಂಡದ್ದರಿಂದ ದೇಶವು ಹಾಳಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಹಾಗೆಯೇ ಮಾಡಿದನು. ಬಾಧಿಸುವ ನೊಣಗಳು ಫರೋಹನ ಅರಮನೆಯಲ್ಲಿಯೂ, ಅವನ ಪರಿವಾರದವರ ಮನೆಗಳಲ್ಲಿಯೂ, ಸಮಸ್ತ ಐಗುಪ್ತ ದೇಶದಲ್ಲಿಯೂ ವಿಪರೀತವಾಗಿ ತುಂಬಿಕೊಂಡವು. ಅವುಗಳಿಂದ ದೇಶವು ಹಾಳಾಗಿಹೋಯಿತು.
Kannada BSI Bible 2016
ಕರ್ತನು ಹಾಗೆಯೇ ಮಾಡಿದನು; ಬಾಧಿಸುವ ನೊಣಗಳು ಫರೋಹನ ಮನೆಯಲ್ಲಿಯೂ ಅವನ ಸೇವಕರ ಮನೆಗಳಲ್ಲಿಯೂ ಸಮಸ್ತ ಐಗುಪ್ತದೇಶ ದಲ್ಲಿಯೂ ತುಂಬಿಕೊಂಡವು; ಅವುಗಳಿಂದ ದೇಶವು ಕೆಟ್ಟುಹೋಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಹಾಗೆಯೇ ಮಾಡಿದನು; ವಿಷದ ಹುಳಗಳು ಫರೋಹನ ಅರಮನೆಯಲ್ಲಿಯೂ ಅವನ ಪರಿವಾರದವರ ಮನೆಗಳಲ್ಲಿಯೂ ಸಮಸ್ತ ಐಗುಪ್ತದೇಶದಲ್ಲಿಯೂ ವಿಪರೀತವಾಗಿ ತುಂಬಿಕೊಂಡವು; ಅವುಗಳಿಂದ ದೇಶವು ಹಾಳಾಯಿತು.
Kannada Bible (KNCL) BSI 2016
ಸರ್ವೇಶ್ವರ ಹಾಗೆಯೇ ಮಾಡಿದರು. ನೊಣಗಳು ಫರೋಹನ ಅರಮನೆಯಲ್ಲೂ ಅವನ ಪರಿವಾರದವರ ಮನೆಗಳಲ್ಲೂ ಸಮಸ್ತ ಈಜಿಪ್ಟ್ ದೇಶದಲ್ಲೂ ಬಹಳವಾಗಿ ತುಂಬಿಕೊಂಡವು. ಅವುಗಳಿಂದ ದೇಶ ಹಾಳಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರು ಹಾಗೆಯೇ ಮಾಡಲಾರಂಭಿಸಿದರು. ಬಾಧಿಸುವ ನೊಣಗಳು ಫರೋಹನ ಮನೆಯಲ್ಲಿಯೂ ಅವನ ಸೇವಕರ ಮನೆಗಳಲ್ಲಿಯೂ ಸಮಸ್ತ ಈಜಿಪ್ಟ್ ದೇಶದಲ್ಲಿಯೂ ಬಂದವು. ನೊಣಗಳಿಂದ ದೇಶವು ಹಾಳಾಗಿ ಹೋಯಿತು.