Exodus 8:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಳಿಕ ಯೆಹೋವನು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ಹಿಡಿದುಕೊಂಡು ಹೊಳೆಗಳ, ಕಾಲುವೆಗಳ ಮತ್ತು ಕೆರೆಗಳ ಮೇಲೆ ಕೈಚಾಚು’ ಎಂದು ಹೇಳು. ಆಗ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳು ಹೊರಬರುವವು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನು ಪುನಃ ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ನಿನ್ನ ಕೋಲನ್ನು ಹಿಡಿದುಕೊಂಡು ಹೊಳೆ, ಕಾಲುವೆ, ಕೆರೆ ಇವುಗಳ ಮೇಲೆ ಅದನ್ನು ಹಿಡಿದುಕೊಂಡು ಕೈಯನ್ನು ಚಾಚು. ಆಗ ಐಗುಪ್ತ ದೇಶದ ಮೇಲೆಲ್ಲಾ ಕಪ್ಪೆಗಳು ಬರುವವು” ಎಂದು ಹೇಳಬೇಕು ಎಂದನು.
Kannada BSI Bible 2016
ಕರ್ತನು ಮೋಶೆಯ ಸಂಗಡ ಮಾತನಾಡಿ--ನೀನು ಆರೋನನಿಗೆ--ನೀನು ಕೋಲನ್ನು ಹಿಡು ಕೊಂಡು ಕಾಲುವೆಗಳ ಮೇಲೆಯೂ ನದಿಗಳ ಮೇಲೆಯೂ ಕೆರೆಗಳ ಮೇಲೆಯೂ ನಿನ್ನ ಕೈಚಾಚು; ಆಗ ಐಗುಪ್ತದೇಶದ ಮೇಲೆಲ್ಲಾ ಕಪ್ಪೆಗಳು ಬರುವವು ಎಂದು ಹೇಳಬೇಕು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವನು ಮೋಶೆಯ ಸಂಗಡ ಮಾತಾಡಿ - ನೀನು ಆರೋನನಿಗೆ - ನೀನು ಕೋಲನ್ನು ಹಿಡಿದುಕೊಂಡು ಹೊಳೆ ಕಾಲುವೆ ಕೆರೆ ಇವುಗಳ ಮೇಲೆ ಕೈಚಾಚು; ಆಗ ಐಗುಪ್ತದೇಶದ ಮೇಲೆಲ್ಲಾ ಕಪ್ಪೆಗಳು ಬರುವವು ಎಂದು ಹೇಳಬೇಕು ಅಂದನು.
Kannada Bible (KNCL) BSI 2016
ಸರ್ವೇಶ್ವರ, ಮೋಶೆಯ ಸಂಗಡ ಮಾತಾಡಿ ಹೀಗೆಂದರು: “ನೀನು ಆರೋನನಿಗೆ, ‘ನಿನ್ನ ಕೋಲನ್ನು ಕಾಲುವೆ, ಹೊಳೆ, ಕೆರೆ ಇವುಗಳ ಮೇಲೆ ಚಾಚು. ಆಗ ಈಜಿಪ್ಟ್ ದೇಶದ ಮೇಲೆಲ್ಲಾ ಕಪ್ಪೆಗಳು ಏರಿಬರುವುವು, ಎಂದು ಹೇಳು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನಂತರ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, “ನೀನು ಆರೋನನಿಗೆ, ‘ನೀನು ಕೋಲನ್ನು ಹಿಡಿದುಕೊಂಡು ನದಿ, ಕಾಲುವೆ, ಕೆರೆಗಳ ಮೇಲೆಲ್ಲಾ ನಿನ್ನ ಕೈಚಾಚಿ ಈಜಿಪ್ಟ್ ದೇಶದ ಮೇಲೆಲ್ಲಾ ಕಪ್ಪೆಗಳು ಬರುವಂತೆ ಮಾಡು,’ ಎಂದು ಹೇಳಬೇಕು,” ಎಂದರು.