Exodus 9:24 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಲಿಕಲ್ಲಿನ ಮಳೆಯು ಭೀಕರವಾಗಿತ್ತು, ಝಗಝಗಿಸುವ ಮಿಂಚೂ ಅದರೊಂದಿಗಿತ್ತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಇಂಥ ಭೀಕರವಾದ ಆಲಿಕಲ್ಲಿನ ಮಳೆ ಎಂದೂ ಆಗಿರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆನೆಕಲ್ಲಿನ ಮಳೆಯು ಬಹು ರಭಸವಾಗಿತ್ತು. ಅದರೊಂದಿಗೆ ಮಿಂಚು ಫಳಫಳನೆ ಹೊಳೆಯುತಿತ್ತು. ಐಗುಪ್ತ್ಯದವರು ಒಂದು ರಾಷ್ಟ್ರವಾದಂದಿನಿಂದ ಆ ದೇಶದಲ್ಲಿ ಅಂಥ ಘೋರವಾದ ಆನೆಕಲ್ಲಿನ ಮಳೆ ಆಗಿರಲಿಲ್ಲ.
Kannada BSI Bible 2016
ಹೀಗೆ ಮಹಾ ಕಠಿಣವಾದ ಆನೆಕಲ್ಲಿನ ಮಳೆಯೂ ಅಗ್ನಿಯಿಂದೊಡ ಗೂಡಿದ ಆನೆಕಲ್ಲಿನ ಮಳೆಯೂ ಸುರಿಯಿತು. ಐಗುಪ್ತವು ಜನಾಂಗವಾದಂದಿನಿಂದ ಇಂಥದ್ದು ಆ ದೇಶದಲ್ಲಿ ಆಗಿರಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಝಗಝಗಿಸುವ ವಿುಂಚೂ ಅದರೊಂದಿಗಿತ್ತು. ಐಗುಪ್ತ್ಯರು ಜನಾಂಗವಾದಂದಿನಿಂದಲೂ ಆ ದೇಶದಲ್ಲಿ ಅಂಥ ಘೋರವಾದ ಕಲ್ಲಿನ ಮಳೆ ಆಗಿರಲಿಲ್ಲ.
Kannada Bible (KNCL) BSI 2016
ಆ ಮಳೆ ಬಲು ರಭಸವಾಗಿತ್ತು. ಅದರೊಂದಿಗೆ ಮಿಂಚು ಫಳಫಳನೆ ಹೊಳೆಯುತ್ತಿತ್ತು. ಈಜಿಪ್ಟಿನವರು ಒಂದು ರಾಷ್ಟ್ರವಾದಂದಿನಿಂದ ಆ ದೇಶದಲ್ಲಿ ಅಂಥ ಘೋರವಾದ ಆನೆಕಲ್ಲಿನ ಮಳೆ ಆಗಿರಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಿಡಿಲಿನ ಆರ್ಭಟದೊಂದಿಗೆ ಕಠಿಣವಾದ ಆಲಿಕಲ್ಲಿನ ಮಳೆಯೂ ಸುರಿಯಿತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಅಂಥ ಘೋರವಾದ ಆಲಿಕಲ್ಲಿನ ಮಳೆಯೂ ಆ ದೇಶದಲ್ಲಿ ಆಗಿರಲಿಲ್ಲ.