Ezekiel 1:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಜೀವಿಗಳು ಯಾವ ದಿಕ್ಕಿಗೆ ನೋಡುತ್ತಿದ್ದವೋ ಅದೇ ಕಡೆಗೆ ಹೋಗುತ್ತಿದ್ದವು. ದೇವರಾತ್ಮನು ಅವುಗಳನ್ನು ಯಾವ ಕಡೆಗೆ ನಡಿಸುತ್ತಾನೋ ಆ ದಿಕ್ಕಿಗೆ ಅವು ಹೋದವು. ಆದರೆ ಹೋಗುತ್ತಿರುವಾಗ ಅವುಗಳು ತಿರುಗಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಜೀವಿಗಳೆಲ್ಲಾ ನೇರ ಮುಖವಾಗಿಯೇ ಹೋಗುತ್ತಿದ್ದವು, ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ಹಿಂತಿರುಗಿನೋಡದೆ ಮುಂದೆ ಹೋದವು.
Kannada BSI Bible 2016
ಅವು ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು; ಆತ್ಮನು ಎಲ್ಲಿಗೆ ಹೋಗುವದಕ್ಕಿದ್ದನೋ ಅಲ್ಲಿಗೆ ಹೋದವು; ಹೋಗುವಾಗ ಅವು ತಿರುಗಿಕೊಳ್ಳಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಜೀವಿಗಳೆಲ್ಲಾ ಹೊರಟ ಮುಖವಾಗಿಯೇ ಹೋಗುತ್ತಿದ್ದವು, ದೇವರಾತ್ಮವು ಸಾಗಿಸಿದ ಕಡೆಗೇ ಸಾಗಿದವು; ತಿರುಗಿಕೊಳ್ಳದೆ ಮುಂದರಿದವು;
Kannada Bible (KNCL) BSI 2016
ಆ ಜೀವಿಗಳೆಲ್ಲ ಹೊರಟ ಮುಖವಾಗಿಯೇ ಹೋಗುತ್ತಿದ್ದವು; ಹಿಂದಿರುಗಿನೋಡದೆ, ದೇವರಾತ್ಮ ಸಾಗಿಸಿದ ಕಡೆಗೇ ಸಾಗುತ್ತಿದ್ದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವೆಲ್ಲವೂ ನೆಟ್ಟಗೆ ಮುಂದಕ್ಕೆ ಹೋದವು. ಅವುಗಳ ಆತ್ಮವು ಎಲ್ಲಿಗೆ ಹೋಗಬೇಕಿತ್ತೋ, ಅಲ್ಲಿಗೇ ಹೋದವು, ಹೋಗುವಾಗ ಅವು ತಿರುಗಿಕೊಳ್ಳಲಿಲ್ಲ.