Ezekiel 13:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಮತ್ತೆಮತ್ತೆ ಆ ಸುಳ್ಳು ಪ್ರವಾದಿಗಳು ನನ್ನ ಜನರಿಗೆ ಸುಳ್ಳು ಹೇಳಿದರು. ಅವರು ಶಾಂತಿ ಇರುವದೆಂದು ಹೇಳಿದರು. ಆದರೆ ಶಾಂತಿ ಇರಲಿಲ್ಲ. ಅದು ಈ ರೀತಿಯಲ್ಲಿದೆ: ಜನರು ಘಲಹೀನವಾದ ಗೋಡೆಯನ್ನು ಕಟ್ಟುತ್ತಾರೆ; ಅದು ಘಲವಾಗಿ ಕಾಣುವಂತೆ ಮಾಡಲು ಪ್ರವಾದಿಗಳು ಅದಕ್ಕೆ ತೆಳುವಾದ ಮಡ್ಡಿ ಮಾಡುತ್ತಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಅಶಾಂತಿಯಿದ್ದರೂ ಅವರು ‘ಶಾಂತಿಯಿದೆ’ ಎಂದು ಹೇಳಿ ನನ್ನ ಜನರನ್ನು ವಂಚಿಸಿದ್ದಾರೆ. ಒಬ್ಬನು ತೆಳುವಾದ ಗೋಡೆಯನ್ನು ಕಟ್ಟಿದ್ದರೂ, ಇಗೋ, ಅದಕ್ಕೆ ಸುಣ್ಣಬಳಿಯುತ್ತಾರೆ;
Kannada BSI Bible 2016
ಸಮಾಧಾನ ವಿಲ್ಲದಿರುವಾಗ ಅವರು ಸಮಾಧಾನವೆಂದು ಹೇಳಿದ್ದರಿಂ ದಲೂ ಮತ್ತು ಇಗೋ, ಒಬ್ಬನು ಗೋಡೆಯನ್ನು ಕಟ್ಟಿದರೆ ಮತ್ತೊಬ್ಬನು ಅದಕ್ಕೆ ಸುಣ್ಣ ಹಚ್ಚಿದ್ದರಿಂದಲೂ
Kannada BSI JV (ಕನ್ನಡ ಸತ್ಯವೇದವು J.V. (BSI))
ಕ್ಷೇಮವಿಲ್ಲದಿದ್ದರೂ ಅವರು ಕ್ಷೇಮ ಎಂದು ಹೇಳಿ ನನ್ನ ಜನರನ್ನು ವಂಚಿಸಿದ್ದಾರಲ್ಲಾ. ಒಬ್ಬನು ತೆಳುವಾದ ಗೋಡೆಯನ್ನು ಕಟ್ಟಿದ್ದರೆ, ಇಗೋ, ಅದಕ್ಕೆ ಸುಣ್ಣ ಬಳಿಯುತ್ತಾರೆ;
Kannada Bible (KNCL) BSI 2016
“ಅಶಾಂತಿಯಿರುವಾಗಲೂ ಅವರು ಶಾಂತಿಯಿದೆ ಎಂದು ಹೇಳಿ ನನ್ನ ಜನಗಳನ್ನು ವಂಚಿಸಿದ್ದಾರೆ. ಜನರು ದುರ್ಬಲ ಗೋಡೆಯನ್ನು ಕಟ್ಟಿದ್ದಾರೆ. ಅದಕ್ಕೆ ಆ ಪ್ರವಾದಿಗಳು ಸುಣ್ಣ ಬಳಿಯುತ್ತಾರೆ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಏಕೆಂದರೆ ಸಮಾಧಾನವಿಲ್ಲದಿರುವಾಗ ಅವರು, “ಸಮಾಧಾನವಿದೆ,” ಎಂದು ಹೇಳಿ, ನನ್ನ ಜನರನ್ನು ತಪ್ಪು ದಾರಿಗೆ ನಡೆಸಿದ್ದಾರೆ. ಒಬ್ಬನು ದುರ್ಬಲ ಗೋಡೆಯನ್ನು ಕಟ್ಟಿದರೆ, ಈ ಪ್ರವಾದಿಗಳ ಗುಂಪು ಅದಕ್ಕೆ ಸುಣ್ಣ ಹಚ್ಚಿದ್ದಾರೆ.