Ezekiel 14:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನರಪುತ್ರನೇ, ನನಗೆ ಅಪನಂಬಿಗಸ್ತರಾಗಿದ್ದು ನನ್ನ ವಿರುದ್ಧ ಪಾಪಮಾಡುವ ಯಾವ ದೇಶವನ್ನಾದರೂ ನಾನು ದಂಡಿಸುತ್ತೇನೆ. ನಾನು ಅವರ ಆಹಾರ ಸರಬರಾಜನ್ನು ನಿಲ್ಲಿಸುತ್ತೇನೆ. ನಾನು ಕ್ಷಾಮವನ್ನು ಕಳುಹಿಸಿ ಅವರ ಜನರನ್ನೂ ಪ್ರಾಣಿಗಳನ್ನೂ ನಾಶಮಾಡುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನರಪುತ್ರನೇ, ಅಪರಾಧವನ್ನು ನಡೆಸಿ ನನ್ನ ವಿರುದ್ಧವಾಗಿ ಪಾಪಮಾಡಿದ ದೇಶದ ಮೇಲೆ ನಾನು ಕೈಯೆತ್ತಿ, ಅದರ ಆಹಾರ ಸರಬರಾಜನ್ನು ತೆಗೆದುಬಿಟ್ಟು, ಕ್ಷಾಮವನ್ನು ಬರಮಾಡಿ, ಜನರನ್ನು, ಪಶುಗಳನ್ನು ಅದರೊಳಗಿಂದ ನಿರ್ಮೂಲ ಮಾಡುತ್ತೇನೆ.
Kannada BSI Bible 2016
ಮನುಷ್ಯಪುತ್ರನೇ, ದೇಶವು ದೊಡ್ಡ ಅಪರಾಧದಿಂದ ನನಗೆ ವಿರುದ್ಧವಾಗಿ ಪಾಪಮಾಡಿದೆ, ನಾನು ಅದರ ಮೇಲೆ ನನ್ನ ಕೈಚಾಚಿ ಅದರ ಜೀವನಾಧಾ ರವನ್ನು ತೆಗೆದುಹಾಕಿ ಕ್ಷಾಮವು ಬರುವ ಹಾಗೆ ಮಾಡಿ ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದು ಬಿಡುವಾಗ,
Kannada BSI JV (ಕನ್ನಡ ಸತ್ಯವೇದವು J.V. (BSI))
ನರಪುತ್ರನೇ, ಅಪರಾಧವನ್ನು ನಡಿಸಿ ನನಗೆ ವಿರುದ್ಧವಾಗಿ ಪಾಪಮಾಡಿದ ದೇಶದ ಮೇಲೆ ನಾನು ಕೈಯೆತ್ತಿ ಅದರ ಜೀವನಾಧಾರವನ್ನು ತೆಗೆದುಬಿಟ್ಟು ಕ್ಷಾಮವನ್ನು ಬರಮಾಡಿ ಜನಪಶುಗಳನ್ನು ಅದರೊಳಗಿಂದ ನಿರ್ಮೂಲಮಾಡುವ ಪಕ್ಷದಲ್ಲಿ
Kannada Bible (KNCL) BSI 2016
“ನರಪುತ್ರನೇ, ಒಂದು ನಾಡು ಅಪರಾಧವನ್ನು ನಡೆಸಿ ನನಗೆ ವಿರುದ್ಧ ಪಾಪಮಾಡಿದ ಮೇಲೆ ನಾನು ಕೈಯೆತ್ತಿ, ಅದರ ಜೀವನಾಧಾರವನ್ನು ನಿಲ್ಲಿಸಿಬಿಟ್ಟು, ಕ್ಷಾಮವನ್ನು ಬರಮಾಡಿ, ಜನ ಹಾಗೂ ಜಾನುವಾರುಗಳನ್ನು ಅದರಿಂದ ನಿರ್ಮೂಲಮಾಡುತ್ತೇನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಮನುಷ್ಯಪುತ್ರನೇ, ದೇಶವು ದೊಡ್ಡ ಅಪರಾಧದಿಂದ ನನಗೆ ವಿರುದ್ಧವಾಗಿ ಪಾಪಮಾಡಿದೆ, ನಾನು ಅದರ ಮೇಲೆ ನನ್ನ ಕೈಚಾಚಿ, ಅದರ ಜೀವನಾಧಾರವನ್ನು ತೆಗೆದುಹಾಕಿ, ಕ್ಷಾಮವು ಬರುವ ಹಾಗೆ ಮಾಡುವೆನು. ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದುಬಿಡುವೆನು.