Ezekiel 14:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನನ್ನ ಜೀವದಾಣೆ, ನೋಹನಾಗಲಿ ದಾನಿಯೇಲನಾಗಲಿ ಯೋಘನಾಗಲಿ ತಮ್ಮ ಪುತ್ರಪುತ್ರಿಯರನ್ನು ರಕ್ಷಿಸಲಾಗುತ್ತಿರಲಿಲ್ಲ. ಅವರು ತಮ್ಮನ್ನು ಮಾತ್ರ ರಕ್ಷಿಸಿಕೊಳ್ಳಘಹುದಾಗಿತ್ತು. ಆದರೆ ದೇಶವು ನಿರ್ಜನವಾಗುತ್ತಿತ್ತು.” ಇವುಗಳನ್ನು ನನ್ನ ಒಡೆಯನಾದ ಯೆಹೋವನೇ ಹೇಳಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಮೂವರು ಪುರುಷರು ಆ ದೇಶದಲ್ಲಿದ್ದರೂ ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡು ಮಕ್ಕಳನ್ನಾಗಲಿ, ಹೆಣ್ಣು ಮಕ್ಕಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ; ದೇಶವು ಹಾಳಾಗಿ ಹೋಗುವುದು” ಇದು ಕರ್ತನಾದ ಯೆಹೋವನ ನುಡಿ.
Kannada BSI Bible 2016
ಈ ಮೂವರು ಮನುಷ್ಯರು ಅದರಲ್ಲಿ ಇದ್ದರೂ ನನ್ನ ಜೀವದಾಣೆ, ಅವರು ಕುಮಾರರ ನ್ನಾಗಲೀ ಕುಮಾರ್ತೆಯರನ್ನಾಗಲೀ ತಪ್ಪಿಸದೆ ತಾವು ಮಾತ್ರ ತಪ್ಪಿಸಿಕೊಳ್ಳುವರು; ಆದರೆ ದೇಶವು ಹಾಳಾಗುವದು ಎಂದು ದೇವರಾದ ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಮೂವರು ಪುರುಷರು ಅದರಲ್ಲಿದ್ದರೂ ನನ್ನ ಜೀವದಾಣೆ ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡುಮಕ್ಕಳನ್ನಾಗಲಿ ಹೆಣ್ಣುಮಕ್ಕಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ; ದೇಶವು ಹಾಳಾಗಿ ಹೋಗುವದು; ಇದು ಕರ್ತನಾದ ಯೆಹೋವನ ನುಡಿ.
Kannada Bible (KNCL) BSI 2016
ಈ ಮೂವರು ವ್ಯಕ್ತಿಗಳು ಅದರಲ್ಲಿದ್ದರೂ, ನನ್ನ ಜೀವದಾಣೆ, ತಾವು ಉಳಿದುಕೊಳ್ಳುತ್ತಿದ್ದರೇ ಹೊರತು ತಮ್ಮ ಗಂಡು ಮಕ್ಕಳನ್ನಾಗಲಿ ಹೆಣ್ಣು ಮಕ್ಕಳನ್ನಾಗಲಿ ಉಳಿಸಿಕೊಳ್ಳುತ್ತಿರಲಿಲ್ಲ; ನಾಡು ಹಾಳಾಗಿ ಹೋಗುವುದು; ಇದು ಸರ್ವೇಶ್ವರನಾದ ದೇವರ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಈ ಮೂರು ಮನುಷ್ಯರಲ್ಲಿ ಅದರಲ್ಲಿ ಇದ್ದರೂ, ನನ್ನ ಜೀವದಾಣೆ ಅವರು ಪುತ್ರರನ್ನಾಗಲಿ, ಪುತ್ರಿಯರನ್ನಾಗಲಿ ಬಿಡಿಸಲು ಆಗುತ್ತಿರಲಿಲ್ಲ, ತಾವು ಮಾತ್ರ ತಪ್ಪಿಸಿಕೊಳ್ಳುವರು. ಆದರೆ ದೇಶವು ಹಾಳಾಗುವುದು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.