Ezekiel 14:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ದೇವರು ಹೇಳಿದ್ದೇನೆಂದರೆ, “ಒಂದುವೇಳೆ, ನಾನು ದೇಶದ ಮೇಲೆ ರೋಗಗಳನ್ನು ಬರಮಾಡಿದರೆ, ಅಥವಾ ನನ್ನ ಕೋಪವನ್ನು ಸುರಿದು ಜನರನ್ನು ಕೊಂದುಹಾಕಿದರೆ ಮತ್ತು ಪ್ರಾಣಿಗಳನ್ನು ನಾಶಮಾಡಿದರೆ,
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನಾನು ಆ ದೇಶದ ಮೇಲೆ ನನ್ನ ಕೋಪವನ್ನು ಹೊಯ್ದು, ರಕ್ತವನ್ನು ಸುರಿಸಿ, ವ್ಯಾಧಿಯನ್ನು ಕಳುಹಿಸಿ, ಜನರನ್ನು, ಪಶುಗಳನ್ನು ನಿರ್ಮೂಲಮಾಡುವ ಪಕ್ಷದಲ್ಲಿ,
Kannada BSI Bible 2016
ಇಲ್ಲದಿದ್ದರೆ ನಾನು ಆ ದೇಶದ ಮೇಲೆ ವ್ಯಾಧಿಯನ್ನು ಕಳುಹಿಸಿ, ಅದರ ಮೇಲೆ ನನ್ನ ರೋಷ ವನ್ನು ರಕ್ತದಲ್ಲಿ ಸುರಿದು, ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದುಬಿಟ್ಟರೆ,
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಆ ದೇಶದ ಮೇಲೆ ನನ್ನ ಕೋಪವನ್ನು ಹೊಯ್ದು ರಕ್ತವನ್ನು ಸುರಿಸಿ ವ್ಯಾಧಿಯನ್ನು ಕಳುಹಿಸಿ ಜನಪಶುಗಳನ್ನು ನಿರ್ಮೂಲಮಾಡುವ ಪಕ್ಷದಲ್ಲಿ
Kannada Bible (KNCL) BSI 2016
“ನಾನು ಆ ನಾಡಿನ ಮೇಲೆ ಕೋಪಕಾರಿ, ರಕ್ತವನ್ನು ಸುರಿಸಿ, ವ್ಯಾಧಿಯನ್ನು ಕಳುಹಿಸಿ, ಜನ ಜಾನುವಾರುಗಳನ್ನು ನಿರ್ಮೂಲಮಾಡುವ ಪಕ್ಷದಲ್ಲಿ
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಾನು ಆ ದೇಶದ ಮೇಲೆ ವ್ಯಾಧಿಯನ್ನು ಕಳುಹಿಸಿ, ಮರಣದಂಡನೆಯಾಗಿ ಅದರ ಮೇಲೆ ನನ್ನ ರೋಷವನ್ನು ಸುರಿದು, ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ತೆಗೆದುಹಾಕುವಾಗ,