Ezekiel 14:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ಅವನ ವಿರುದ್ಧವಾಗಿ ತಿರುಗಿ ಅವನನ್ನು ನಾಶಮಾಡುವೆನು. ಅವನು ಇಸ್ರೇಲರಿಗೆ ನಿದರ್ಶನವಾಗಿರಬೇಕು, ಜನರು ಅವನನ್ನು ನೋಡಿ ನಗಾಡುವರು. ನಾನು ಅವನನ್ನು ನನ್ನ ಜನರ ಮಧ್ಯದಿಂದ ತೆಗೆದು ಬಿಡುವೆನು. ಆಗ ನೀವು ನಾನೇ ಯೆಹೋವನೆಂದು ತಿಳಿಯುವಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನ ಮೇಲೆ ಉಗ್ರಕೋಪಗೊಂಡು, ಅವನನ್ನು ಎಚ್ಚರಿಕೆಗೆ ಗುರುತಾಗಿಯೂ, ಕಟ್ಟು ಗಾದೆಗಳಿಗೂ ವಸ್ತುವಾಗಿ ಮಾಡಿ, ನನ್ನ ಜನರೊಳಗಿಂದ ಕಿತ್ತುಹಾಕುವೆನು; ಹೀಗೆ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
Kannada BSI Bible 2016
ನಾನು ಆ ಮನುಷ್ಯನ ಮೇಲೆ ಉಗ್ರಕೋಪಗೊಂಡು ಅವು ನನ್ನ ಗುರುತನ್ನಾಗಿಯೂ ಗಾದೆಯನ್ನಾಗಿಯೂ ಮಾಡಿಕೊಂಡು ನನ್ನ ಜನರ ಮಧ್ಯದೊಳಗಿಂದ ಕಡಿದು ಬಿಡುವೆನು; ನಾನೇ ಕರ್ತನೆಂದು ತಿರಿಗಿ ತಿಳಿದುಕೊಳ್ಳು ವಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನ ಮೇಲೆ ಉಗ್ರಕೋಪಗೊಂಡು ಅವನ ಗತಿಯನ್ನು ಬೆರಗಿಗೂ ಎಚ್ಚರಿಕೆಯ ಮಾತುಗಳಿಗೂ ಕಟ್ಟುಗಾದೆಗಳಿಗೂ ಈಡುಮಾಡಿ ಅವನನ್ನು ನನ್ನ ಜನರೊಳಗಿಂದ ಕಿತ್ತುಹಾಕುವೆನು; ಹೀಗೆ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.
Kannada Bible (KNCL) BSI 2016
ಅವನಿಗೆ ವಿಮುಖನಾಗಿ ಅವನ ದುರ್ಗತಿಯು ಎಚ್ಚರಿಕೆಗೆ ಗುರುತಾಗಿಯೂ ಕಟ್ಟುಗಾದೆಗಳಿಗೆ ವಸ್ತುವಾಗಿಯೂ ಆಗುವಂತೆ ಮಾಡುವೆನು; ಅವನನ್ನು ನನ್ನ ಜನರಿಂದ ಹೊರಹಾಕುವೆನು; ಹೀಗೆ ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಅಂಥವನ ಮೇಲೆ ಬಹುಕೋಪಗೊಂಡು, ಅವನನ್ನು ಗುರುತನ್ನಾಗಿಯೂ, ಗಾದೆಯನ್ನಾಗಿಯೂ ಮಾಡಿ, ನನ್ನ ಜನರ ಮಧ್ಯದೊಳಗಿಂದ ತೆಗೆದುಬಿಡುವೆನು. ಹೀಗೆ ನಾನೇ ಯೆಹೋವ ದೇವರು ಎಂದು ನಿಮಗೆ ಗೊತ್ತಾಗುವುದು.