Ezekiel 16:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ನಿನಗೆ ಕೊಟ್ಟ ಬೆಳ್ಳಿಘಂಗಾರಗಳ ಆಭರಣಗಳಿಂದ ನೀನು ಗಂಡು ವಿಗ್ರಹಗಳನ್ನು ಮಾಡಿಕೊಂಡು ಅವುಗಳೊಂದಿಗೆ ಸೂಳೆಯಂತೆ ವರ್ತಿಸಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮತ್ತು ನಾನು ನನ್ನ ಬೆಳ್ಳಿ ಬಂಗಾರದಿಂದ ನಿನಗೆ ಮಾಡಿಸಿಕೊಟ್ಟಿದ್ದ ನಿನ್ನ ಚಂದವಾದ ಆಭರಣಗಳನ್ನು ನೀನು ತೆಗೆದು ಅವುಗಳಿಂದ ಪುರುಷ ಮೂರ್ತಿಗಳನ್ನು ರೂಪಿಸಿಕೊಂಡು ಅವುಗಳೊಡನೆ ವ್ಯಭಿಚಾರ ಮಾಡಿದೆ.
Kannada BSI Bible 2016
ಇದಲ್ಲದೆ ನಾನು ನಿನಗೆ ಬೆಳ್ಳಿ ಬಂಗಾರದಿಂದ ಮಾಡಿಸಿಕೊಟ್ಟಿದ್ದ ನಿನ್ನ ಅಂದವಾದ ಆಭರಣಗಳನ್ನು ತೆಗೆದು ಅವುಗಳಿಂದ ಪುರುಷ ರೂಪಗಳನ್ನು ಮಾಡಿಕೊಂಡು ಅದರ ಸಂಗಡ ವ್ಯಭಿಚಾರ ಮಾಡಿದಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮತ್ತು ನಾನು ನನ್ನ ಬೆಳ್ಳಿಬಂಗಾರದಿಂದ ಮಾಡಿಸಿ ನಿನಗೆ ಕೊಟ್ಟಿದ್ದ ನಿನ್ನ ಚಂದವಾದ ಆಭರಣಗಳನ್ನು ನೀನು ತೆಗೆದು ಅವುಗಳಿಂದ ಪುರುಷಮೂರ್ತಿಗಳನ್ನು ರೂಪಿಸಿಕೊಂಡು ಅವುಗಳೊಡನೆ ಹಾದರಮಾಡಿದಿ;
Kannada Bible (KNCL) BSI 2016
ನಾನು ನನ್ನ ಬೆಳ್ಳಿಬಂಗಾರದಿಂದ ನಿನಗೆ ಮಾಡಿಸಿಕೊಟ್ಟಿದ್ದ ಅಂದಚೆಂದವಾದ ಆಭರಣಗಳನ್ನು ತೆಗೆದು, ಅವುಗಳಿಂದ ಪುರುಷಮೂರ್ತಿಗಳನ್ನು ರೂಪಿಸಿಕೊಂಡು, ಅವುಗಳೊಡನೆ ಹಾದರ ಮಾಡಿದೆ;
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ನಾನು ನಿನಗೆ ಬೆಳ್ಳಿಬಂಗಾರದಿಂದ ಮಾಡಿಸಿಕೊಟ್ಟಿದ್ದ ನಿನ್ನ ಅಂದವಾದ ಆಭರಣಗಳನ್ನು ತೆಗೆದು, ಅವುಗಳಿಂದ ಪುರುಷಮೂರ್ತಿಗಳನ್ನು ಮಾಡಿಕೊಂಡು ಅದರ ಸಂಗಡ ವ್ಯಭಿಚಾರ ಮಾಡಿದೆ.