Ezekiel 16:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ನಿನಗೆ ರೊಟ್ಟಿ, ಜೇನು ಮತ್ತು ಎಣ್ಣೆಯನ್ನು ಕೊಟ್ಟಿದ್ದೆನು. ಆದರೆ ನೀನು ಆ ಆಹಾರವನ್ನು ಮೂರ್ತಿಗಳಿಗೆ ಕೊಟ್ಟೆ. ಆ ಸುಳ್ಳು ದೇವರುಗಳನ್ನು ಮೆಚ್ಚಿಸುವದಕ್ಕೋಸ್ಕರ ನೀನು ಅವುಗಳನ್ನು ಸುಗಂಧವಾಸನೆಯ ಕಾಣಿಕೆಯಂತೆ ಅರ್ಪಿಸಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ನಿನಗೆ ಕೊಟ್ಟ ರೊಟ್ಟಿಯನ್ನೂ, ನಿನ್ನ ಆಹಾರಕ್ಕೆ ನಾನು ಒದಗಿಸಿದ ಗೋದಿಹಿಟ್ಟು, ಎಣ್ಣೆ, ಜೇನು ಇವುಗಳನ್ನೂ ನೀನು ಆ ಮೂರ್ತಿಗಳ ಮುಂದೆ ಸುಗಂಧಹೋಮ ಮಾಡಿದೆ; ಅಯ್ಯೋ, ಹೀಗಾಯಿತಲ್ಲ!” ಇದು ಕರ್ತನಾದ ಯೆಹೋವನ ನುಡಿ.
Kannada BSI Bible 2016
ನಾನು ನಿನಗೆ ನನ್ನ ಆಹಾರವನ್ನೂ ನಿನಗೆ ನಯವಾದ ಹಿಟ್ಟನ್ನೂ ಎಣ್ಣೆ ಮತ್ತು ಜೇನುಗಳನ್ನೂ ಸುವಾಸನೆಗಾಗಿ ಕೊಟ್ಟೆ. ಆದರೆ ನೀನು ಅವುಗಳನ್ನು ಅವರ ಮುಂದೆ ಇಟ್ಟೆ ಎಂದು ದೇವರಾದ ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ನಿನಗೆ ಕೊಟ್ಟ ರೊಟ್ಟಿಯನ್ನೂ ನಿನ್ನ ಆಹಾರಕ್ಕೆ ನಾನು ಒದಗಿಸಿದ ಗೋದಿಹಿಟ್ಟು, ಎಣ್ಣೆ, ಜೇನು ಇವುಗಳನ್ನೂ ನೀನು ಆ ಮೂರ್ತಿಗಳ ಮುಂದೆ ಸುಗಂಧಹೋಮ ಮಾಡಿದಿ; ಅಯ್ಯೋ, ಹೀಗಾಯಿತಲ್ಲ! ಇದು ಕರ್ತನಾದ ಯೆಹೋವನ ನುಡಿ.
Kannada Bible (KNCL) BSI 2016
ನಾನು ನಿನಗೆ ಕೊಟ್ಟ ರೊಟ್ಟಿಯನ್ನೂ ನಿನ್ನ ಆಹಾರಕ್ಕೆ ನಾನು ಒದಗಿಸಿದ ಗೋದಿಹಿಟ್ಟು, ಎಣ್ಣೆ, ಜೇನು, ಇವುಗಳನ್ನೂ, ನೀನು ಆ ಮೂರ್ತಿಗಳ ಮುಂದೆ ಸುಗಂಧಹೋಮ ಮಾಡಿದೆ; ಅಯ್ಯೋ, ನಿನಗೆ ಕೇಡು! ಇದು ಸರ್ವೇಶ್ವರನಾದ ದೇವರ ನುಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ನಿಮಗೆ ಒದಗಿಸಿದ ಆಹಾರ, ಹಿಟ್ಟು, ಎಣ್ಣೆ ಮತ್ತು ಜೇನುತುಪ್ಪವನ್ನು ನಾನು ನಿಮಗೆ ತಿನ್ನಲು ಕೊಟ್ಟಿದ್ದೇನೆ. ನೀವು ಅವರ ಮುಂದೆ ಪರಿಮಳಯುಕ್ತ ಧೂಪವನ್ನು ಅರ್ಪಿಸಿದ್ದೀರಿ. ಆದರೆ ನೀನು ಅವುಗಳನ್ನು ಅವರ ಮುಂದೆ ಇಟ್ಟೆ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.