Ezekiel 16:33 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ವೇಶ್ಯೆಯರು ತಮ್ಮೊಡನೆ ಕೂಡುವದಕ್ಕಾಗಿ ಪುರುಷರಿಂದ ಹಣ ವಸೂಲಿ ಮಾಡುವರು. ಆದರೆ ನಿನ್ನ ಪ್ರಿಯತಮರಿಗೆ ನೀನೇ ಹಣವನ್ನು ಕೊಟ್ಟಿರುವೆ. ನಿನ್ನೊಂದಿಗೆ ಸಂಭೋಗ ಮಾಡಲು ನೀನೇ ಅವರಿಗೆ ಹಣವನ್ನು ಕೊಟ್ಟಿರುವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಎಲ್ಲಾ ಕಡೆ ವ್ಯಭಿಚಾರಿ ಸ್ತ್ರೀಗೆ ಹಣಕೊಡುವುದುಂಟು; ನೀನಾದರೋ ನಿನ್ನ ಪ್ರಿಯರಿಗೆಲ್ಲ ನೀನೇ ಹಣವನ್ನು ಕೊಡುತ್ತಿರುವೆ; ಅವರು ಎಲ್ಲಾ ಕಡೆಯಿಂದಲೂ ಬಂದು ನಿನ್ನಲ್ಲಿ ವ್ಯಭಿಚಾರಮಾಡುವಂತೆ ಅವರಿಗೆ ಬಹುಮಾನ ಕೊಡುತ್ತಿರುವೆ.
Kannada BSI Bible 2016
ಅವರು ವ್ಯಭಿಚಾರಿಗಳಿಗೆಲ್ಲ ಬಹು ಮಾನ ಕೊಡುತ್ತಾರೆ; ಆದರೆ ನೀನು ನಿನ್ನ ಪ್ರಿಯರಿಗೆಲ್ಲ ನಿನ್ನ ಬಹುಮಾನಗಳನ್ನು ಕೊಟ್ಟು ಅವರನ್ನು ಬಾಡಿಗೆಗೆ ಪಡೆದು ನಿನ್ನ ವ್ಯಭಿಚಾರಕ್ಕಾಗಿ ನಿನ್ನ ಬಳಿಗೆ ಬರುವ ಹಾಗೆ ಅವರಿಗೆ ಬಹುಮಾನ ಕೊಡುತ್ತೀ.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಲ್ಲಾ ಕಡೆ ಸೂಳೆಯರಿಗೆ ಹಣಕೊಡುವದುಂಟು; ನೀನಾದರೂ ನಿನ್ನ ಎಲ್ಲಾ ವಿುಂಡರಿಗೆ ನೀನೇ ಕೊಡುತ್ತೀ; ಅವರು ಎಲ್ಲಾ ಕಡೆಯಿಂದಲೂ ಬಂದು ನಿನ್ನಲ್ಲಿ ವ್ಯಭಿಚಾರಮಾಡುವಂತೆ ಅವರಿಗೆ ಇನಾಮು ಕೊಡುತ್ತಿ.
Kannada Bible (KNCL) BSI 2016
ಸಾಮಾನ್ಯವಾಗಿ ಸೂಳೆಯರಿಗೆ ಹಣ ಕೊಡುವುದುಂಟು; ನೀನಾದರೋ ನಿನ್ನ ಎಲ್ಲಾ ಮಿಂಡರಿಗೆ ನೀನೇ ಹಣ ನೀಡುತ್ತಿರುವೆ. ಅವರು ಎಲ್ಲ ಕಡೆಯಿಂದಲೂ ಬಂದು ನಿನ್ನಲ್ಲಿ ವ್ಯಭಿಚಾರಮಾಡುವಂತೆ ಅವರಿಗೆ ಬಹುಮಾನ ಕೊಡುತ್ತಿರುವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಾಮಾನ್ಯವಾಗಿ ವ್ಯಭಿಚಾರಿಗಳಿಗೆ ಬಹುಮಾನ ಕೊಡುತ್ತಾರೆ. ಆದರೆ ನೀನೇ ನಿನ್ನ ಪ್ರಿಯರಿಗೆಲ್ಲ ಬಹುಮಾನಗಳನ್ನು ಕೊಟ್ಟು, ನಿನ್ನ ವ್ಯಭಿಚಾರಕ್ಕಾಗಿ ನಿನ್ನ ಬಳಿಗೆ ಬರುವ ಹಾಗೆ ಅವರಿಗೆ ಲಂಚ ಕೊಡುತ್ತಿರುವೆ.