Ezekiel 17:15 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಈ ಹೊಸ ರಾಜನು ನೆಘೂಕದೆಐಚ್ಚರನಿಗೆ ತಿರುಗಿ ಬೀಳಲು ಪ್ರಯತಿಐಸಿದನು. ಅವನು ಈಜಿಪ್ಟಿಗೆ ದೂತರನ್ನು ಕಳುಹಿಸಿ ಸಹಾಯವನ್ನು ಕೇಳಿದನು. ಘಹಳ ಕುದುರೆಗಳನ್ನೂ ಸೈನಿಕರನ್ನೂ ಕೇಳಿದನು. ಯೆಹೂದದ ಹೊಸ ರಾಜನು ತನ್ನ ಪ್ರಯತಐದಲ್ಲಿ ಜಯಶಾಲಿಯಾಗುವನು ಎಂದು ಭಾವಿಸುವಿರೋ? ಈ ಹೊಸ ರಾಜನು ಒಪ್ಪಂದವನ್ನು ಮುರಿದು ಶಿಕ್ಷೆಯಿಂದ ಪಾರಾಗುವನೆಂದು ನೀವು ಭಾವಿಸುವಿರೋ?”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ಅವನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದು ಕುದುರೆಗಳನ್ನೂ ಮತ್ತು ಬಹಳ ಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಐಗುಪ್ತಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಆದರೂ ಇವನು ಗೆಲ್ಲುವನೋ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೋ? ಒಡಂಬಡಿಕೆಯನ್ನು ಮೀರಿದವನು ತಪ್ಪಿಸಿಕೊಂಡಾನೇ?”
Kannada BSI Bible 2016
ಆದರೆ ಇವನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು ತನ್ನ ರಾಯಭಾರಿಗಳನ್ನು ಐಗುಪ್ತಕ್ಕೆ ಕಳು ಹಿಸಿ ತನಗೆ ಕುದುರೆಗಳನ್ನೂ ಬಹಳ ಜನರನ್ನೂ ಕೊಡ ಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿ ಯಾಗುವನೋ? ಇಂಥಾ ಸಂಗತಿಗಳನ್ನು ಮಾಡುವ ವನು ತಪ್ಪಿಸಿಕೊಳ್ಳುವನೋ? ಅಥವಾ ಒಡಂಬಡಿಕೆ ಯನ್ನು ಮುರಿದು ತಪ್ಪಿಸಿಕೊಳ್ಳಲಾಗುವದೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ಅವನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದು ಕುದುರೆಗಳನ್ನೂ ಬಹುಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಐಗುಪ್ತಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಇವನು ಸಮೃದ್ಧನಾಗಿಯೇ ಇರುವನೋ? ಇಂಥಾ ಕೃತ್ಯಗಳನ್ನು ನಡಿಸಿದವನು ಪಾರಾಗುವನೋ? ಒಡಂಬಡಿಕೆಯನ್ನು ಮೀರಿದವನು ತಪ್ಪಿಸಿಕೊಂಡಾನೇ?
Kannada Bible (KNCL) BSI 2016
ಆದರೆ ಅವನು ಬಾಬಿಲೋನಿನ ಅರಸನ ವಿರುದ್ಧ ದಂಗೆಯೆದ್ದು ಕುದುರೆಗಳನ್ನೂ ಬಹುಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಈಜಿಪ್ಟಿಗೆ ರಾಯಭಾರಿಗಳನ್ನು ಕಳುಹಿಸಿದ. ಆದರೂ ಇವನು ಗೆಲ್ಲುವನೇ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೇ? ಒಪ್ಪಂದವನ್ನು ಮೀರಿದವನು ತಪ್ಪಿಸಿಕೊಂಡಾನೇ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಅರಸನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು, ತನ್ನ ರಾಯಭಾರಿಗಳನ್ನು ಈಜಿಪ್ಟಿಗೆ ಕಳುಹಿಸಿ, ತನಗೆ ಕುದುರೆಗಳನ್ನೂ, ಬಹಳ ಜನರನ್ನೂ ಕೊಡಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿಯಾಗುವನೋ? ಇಂತಹ ಸಂಗತಿಗಳನ್ನು ಮಾಡುವವನು ತಪ್ಪಿಸಿಕೊಳ್ಳುವನೋ ಅಥವಾ ಒಡಂಬಡಿಕೆಯನ್ನು ಮುರಿದು ತಪ್ಪಿಸಿಕೊಳ್ಳಲಾಗುವುದೋ?