Ezekiel 19:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿನ್ನ ತಾಯಿಯು ನೀರಾವರಿಯಲ್ಲಿ ನೆಟ್ಟ ದ್ರಾಕ್ಷಾಲತೆಯಂತಿದ್ದಳು. ಙೇಕಾದಷ್ಟು ನೀರು ಇದ್ದುದರಿಂದ ಅದು ಫಲಭರಿತವಾಗಿದ್ದು ಅನೇಕ ಕೊಂಬೆಗಳನ್ನು ಹೊಂದಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“‘ನಿನ್ನ ಹೆತ್ತ ತಾಯಿ ನೀರಾವರಿಯಲ್ಲಿ ನಾಟಿಕೊಂಡಿದ್ದ ದ್ರಾಕ್ಷಾಲತೆಯಾಗಿದ್ದಳು, ಆ ಲತೆಯು ತುಂಬಾ ನೀರಾವರಿಯಿಂದ ಫಲವತ್ತಾಗಿಯೂ, ಪೊದೆಯಾಗಿಯೂ ಬೆಳೆದಿತ್ತು.
Kannada BSI Bible 2016
ನಿನ್ನ ತಾಯಿ ನಿನ್ನ ರಕ್ತದಲ್ಲಿ ನೀರಿನ ಬಳಿ ನೆಟ್ಟ ದ್ರಾಕ್ಷೆಯ ಗಿಡದ ಹಾಗೆ ಇದ್ದಾಳೆ; ಅದು ನೀರಾವರಿ ಯಿಂದಲೂ ಫಲವುಳ್ಳದ್ದಾಗಿಯೂ ತುಂಬಾ ಕೊಂಬೆ ಗಳುಳ್ಳದ್ದಾಗಿಯೂ ಇದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿನ್ನ ಹೆತ್ತ ತಾಯಿ ನೀರಾವರಿಯಲ್ಲಿ ನಾಟಿಕೊಂಡಿದ್ದ ದ್ರಾಕ್ಷಾಲತೆಯಾಗಿದ್ದಳು, ಆ ಲತೆಯು ತುಂಬಾ ತಂಪಿನಿಂದ ಫಲವತ್ತಾಗಿಯೂ ಪೊದೆಯಾಗಿಯೂ ಬೆಳೆದಿತ್ತು.
Kannada Bible (KNCL) BSI 2016
ನಿನ್ನ ಹೆತ್ತ ತಾಯಿ ದ್ರಾಕ್ಷಾಲತೆಯಂತೆ ನೀರಾವರಿಯಲಿ ನಾಟಿದ್ದಾ ಲತೆಯಂತೆ ಬೆಳೆದಿತ್ತದು ಫಲವತ್ತಾಗಿ, ಹುಲುಸಾಗಿ, ಅತಿ ತಂಪಾಗಿಯೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ನಿನ್ನ ತಾಯಿ ನೀರಿನ ಬಳಿಯಲ್ಲಿ ನೆಟ್ಟ ದ್ರಾಕ್ಷಿ ಗಿಡದ ಹಾಗೆ ಇದ್ದಾಳೆ. ಅದು ಸಮೃದ್ಧಿಯಾದ ನೀರಾವರಿಯಿಂದ ಫಲವುಳ್ಳದ್ದಾಗಿಯೂ ಇದೆ.