Ezekiel 19:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದರ ಸಬಂತ ಕಾಂಡದಿಂದಲೇ ಬೆಂಕಿಯು ಹೊರಟುಬಂದು ಅದರ ಚಿಕ್ಕ ಕೊಂಬೆಗಳನ್ನು ಮತ್ತು ಫಲಗಳನ್ನು ನಾಶಮಾಡಿತು. ಈಗ ಘಲವಾದ ಕಾಂಡ ಅದರಲ್ಲಿಲ್ಲ. ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’ ಇದು ಮರಣದ ಶೋಕಗೀತೆ. ಇದನ್ನು ಶೋಕಗೀತೆಯನ್ನಾಗಿಯೇ ಘಳಸಲಾಗುತ್ತಿದೆ.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆಂಕಿಯು ಅದರ ಕೊಂಬೆಗಳಿಂದ ಹೊರಟು ಅದರ ಫಲವನ್ನು ನುಂಗಿ ಬಿಟ್ಟಿದೆ. ಆದುದರಿಂದ ರಾಜದಂಡಕ್ಕೆ ಯೋಗ್ಯವಾದ ಯಾವ ಗಟ್ಟಿ ಕೊಂಬೆಯೂ ಅದರಲ್ಲಿ ಉಳಿದಿಲ್ಲ.’ ಇದು ಶೋಕ ಗೀತೆ, ಶೋಕ ಗೀತೆಯಾಗಿ ವಾಡಿಕೆಯಲ್ಲಿದೆ.”
Kannada BSI Bible 2016
ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆಂಕಿಯು ದಂಡರೂಪವಾದ ಅದರ ಶಾಖೆಗಳಿಂದ ಹೊರಟು ಅದರ ಫಲವನ್ನು ನುಂಗಿಬಿಟ್ಟದ್ದರಿಂದ ರಾಜದಂಡಕ್ಕೆ ಯೋಗ್ಯವಾದ ಯಾವ ಗಟ್ಟಿಕೊಂಬೆಯೂ ಅದರಲ್ಲಿ ಉಳಿದಿಲ್ಲ. ಇದು ಶೋಕಗೀತ, ಶೋಕಗೀತವಾಗಿ ವಾಡಿಕೆಯಲ್ಲಿದೆ.
Kannada Bible (KNCL) BSI 2016
ಅದರ ಕಾಂಡದಿಂದ ಹೊರಟ ಬೆಂಕಿಯು ದಹಿಸಿಬಿಟ್ಟಿದೆ ಅದರ ಫಲಗಳನು ಎಂದೇ ಇನ್ನು ಉಳಿದಿಲ್ಲ ಅದರೊಳು ರಾಜದಂಡಕೆ ಯೋಗ್ಯವಾದ ಗಟ್ಟಿಕೊಂಬೆಯು.” ಇದೊಂದು ಶೋಕ ಗೀತೆ; ರೂಢಿಯಲ್ಲಿ ಇರುವ ಜಾನಪದ ಗೀತೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು, ಅದರಲ್ಲಿ ಫಲವನ್ನು ತಿಂದುಬಿಟ್ಟಿದೆ. ಅದರಲ್ಲಿ ಆಳುವುದಕ್ಕೆ ರಾಜದಂಡಕ್ಕಾಗಿ ತಕ್ಕ ಬಲವುಳ್ಳ ಬಳ್ಳಿಯು ಈಗ ಇಲ್ಲ.’ ಇದು ಪ್ರಲಾಪವಾಗಿದೆ. ಪ್ರಲಾಪಕ್ಕಾಗಿಯೇ ಇದೆ.”