Ezekiel 19:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“‘ನಿನ್ನ ತಾಯಿಯು ಏನಾಗಿದ್ದಳು? ಆಕೆಯು ಸಿಂಹಗಳ ಮಧ್ಯದಲ್ಲಿ ಸಿಂಹಿಣಿಯಾಗಿದ್ದಳು. ಆಕೆಯು ಪ್ರಾಯದ ಸಿಂಹಗಳೊಡನೆ ಮಲಗಿ ತನ್ನ ಮರಿಗಳನ್ನು ಸಾಕಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ಆಹಾ, ನಿನ್ನ ತಾಯಿಯು ಸಿಂಹಗಳ ಮಧ್ಯೆ ಸಿಂಹಿಣಿ, ಸಾಕಿದಳು ತನ್ನ ಮರಿಗಳನ್ನು, ಯುವ ಸಿಂಹಗಳ ನಡುವೆ ವಾಸಿಸಿ.
Kannada BSI Bible 2016
ಹೀಗೆ ಹೇಳು--ನಿನ್ನ ತಾಯಿ ಏನು? ಒಂದು ಸಿಂಹಿಣಿಯೇ, ಆಕೆ ಸಿಂಹಗಳ ಜೊತೆ ಮಲಗಿ ಪ್ರಾಯದ ಸಿಂಹಗಳ ಮಧ್ಯದಲ್ಲಿ ತನ್ನ ಮರಿಗಳನ್ನು ಸಾಕಿದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ನಿನ್ನ ತಾಯಿಯು ಸಿಂಹಗಳೊಳಗಿನ ಸಿಂಹಿ, ಪ್ರಾಯದ ಸಿಂಹಗಳ ನಡುವೆ ಮಲಗಿತು, ಮರಿಗಳನ್ನು ಸಾಕಿತು.
Kannada Bible (KNCL) BSI 2016
ಇಗೋ, ನಿನ್ನ ತಾಯಿ, ಸಿಂಹಗಳ ಮಧ್ಯೆ ಸಿಂಹಿಣಿ, ಸಾಕಿದಳು ತನ್ನ ಮರಿಗಳನು, ಯುವ ಸಿಂಹಗಳ ನಡುವೆ ಪವಡಿಸಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೀಗೆ ಹೇಳು: “ ‘ಇಗೋ, ನಿನ್ನ ತಾಯಿ, ಸಿಂಹಗಳ ಮಧ್ಯೆ ಸಿಂಹಿಣಿ, ತನ್ನ ಮರಿಗಳನ್ನು ಸಾಕಿ, ಯುವ ಸಿಂಹಗಳ ನಡುವೆ ವಾಸಿಸಿತು.